ವಿಧಾನಸೌಧ ವಜ್ರ ಮಹೋತ್ಸವಕ್ಕೆ ದುಂದು ವೆಚ್ಚ ಮಾಡುತ್ತಿದ್ದೀರೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಅ.16): ವಿಧಾನಸೌಧ ವಜ್ರ ಮಹೋತ್ಸವಕ್ಕೆ ದುಂದು ವೆಚ್ಚ ಮಾಡುತ್ತಿದ್ದೀರೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವಜ್ರ ಮಹೋತ್ಸವ ಆಚರಣೆ ಇರಲಿ.ಆದರೆ,ಶಾಸಕರಿಗೆ ಚಿನ್ನದ ಬಿಸ್ಕತ್,ನೌಕರರಿಗೆ ಬೆಳ್ಳಿ ತಟ್ಟೆಯಂತಹಾ ಉಡುಗೊರೆ ಅಗತ್ಯವಿಲ್ಲ ಎಂದು ಡಾ.ಜಿ.ಪರಮೇಶ್ವರ ಹೇಳಿಕೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆಗೆ ಸಜ್ಜಾಗಬೇಕಾಗಿದೆ. ಹಾಗಾಗಿಯೇ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ಹೊಸದಾಗಿ ರಚಿಸಲಾಗಿದೆ. ಜಿಲ್ಲಾಘಟಕಗಳ ಬದಲಾವಣೆಗೂ ಒತ್ತಡವಿತ್ತು. ಪರಿಣಾಮ ಕೆಲವು ಜಿಲ್ಲೆಗಳಲ್ಲಿ ಬದಲಾವಣೆ ಮಾಡಿದ್ದೇವೆ. ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ.
ಅವರಿಗೆ ತಮ್ಮ ಕ್ಷೇತ್ರಗಳಲ್ಲಿ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಸಿ.ಪಿ.ಯೋಗೀಶ್ವರ್ ಸೇರಿದಂತೆ ಕೆಲವರು ಪಕ್ಷ ಬಿಡುವ ಸೂಚನೆಯಿರಲಿಲ್ಲ. ಪಕ್ಷ ಬಿಟ್ಟವರ ಬಗ್ಗೆ ಚಿಂತೆಯೂ ಇಲ್ಲ. ಬಿಜೆಪಿಯಿಂದ 20 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ.
