. ಗೃಹ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಕೂಡಲೇ ರಾಮಲಿಂಗಾರೆಡ್ಡಿ ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ರನ್ನು ಭೇಟಿ ಮಾಡಿದರು.

ಬೆಂಗಳೂರು(ಸೆ.02): ನೂತನ ಗೃಹ ಸಚಿವರಿಗೆ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕೆಂಪಯ್ಯ ಬಗ್ಗೆ ಬೀ ಅಲರ್ಟ್ ಅನ್ನೋ ಸಲಹೆ ಸಿಕ್ಕಿದೆ. ಇಂತಹ ಸಲಹೇ ನೀಡಿದ್ದು ಬೇರಾರೂ ಅಲ್ಲ ನಿಕಟಪೂರ್ವ ಗೃಹ ಸಚಿವ ಜಿ ಪರಮೇಶ್ವರ್.ಇದೇ ವೇಳೆ,ಸಿದ್ದರಾಮಯ್ಯ ಗೃಹ ಸಚಿವ ರಾಮಲಿಂಗಾರೆಡ್ಡಿಗೆ ಕೆಲ ಅಸೈನ್ಮೆಂಟ್​ಗಳನ್ನ ನೀಡಿದ್ದಾರೆ.

ನೂತನ ಗೃಹ ಸಚಿವರಾಗಿ ರಾಮಲಿಂಗಾರೆಡ್ಡಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸಲಹೆಗಳ ಸುರಿಮಳೆಯಾಗಿದೆ. ಗೃಹ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಕೂಡಲೇ ರಾಮಲಿಂಗಾರೆಡ್ಡಿ ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ರನ್ನು ಭೇಟಿ ಮಾಡಿದರು.

ಈ ವೇಳೆ ಕೆಲ ಸಲಹೆಗಳನ್ನು ನೀಡಿದ ಪರಮೇಶ್ವರ್ ಅವರು ಕೆಂಪಯ್ಯರಿಂದ ಹುಷಾರಾಗಿರಿ. ಕೆಂಪಯ್ಯರನ್ನ ಆದಷ್ಟು ಅವೈಡ್ ಮಾಡಿ. ಸಿದ್ದರಾಮಯ್ಯ ಅವರು ಕೆಂಪಯ್ಯರನ್ನ ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ. ಇಲಾಖೆಯನ್ನು ಬಹಳ ನಾಜೂಕಾಗಿ ಕಾರ್ಯ ನಿರ್ವಹಿಸಿ. ಆದಷ್ಟು ಇಲಾಖೆಯನ್ನು ಸ್ವತಂತ್ರವಾಗಿ ನಿಭಾಯಿಸಲು ಪ್ರಯತ್ನ ಪಡಿ' ಎಂದು ತಿಳಿಸಿದ್ದಾರೆ.