ಖ್ಯಾತ ನಾಮರಲ್ಲದೆ ಸನ್ ಟಿವಿ, ಅಪೋಲೊ ಟೈರ್ಸ್, ಹ್ಯಾವೆಲ್ಸ್, ಹಿಂದುಜಾಸ್, ಎಮಾರ್ ಎಂಜಿಎಫ್, ವಿಡಿಯೋಕಾನ್ ನಂತಹ ಪ್ರತಿಷ್ಠಿತ ಹೆಸರುಗಳು ಉಲ್ಲೇಖವಾಗಿವೆ.
ನವದೆಹಲಿ(ನ.07): ಒಟ್ಟು 67 ದೇಶಗಳ 380ಕ್ಕೂ ಅಧಿಕ ಪತ್ರಕರ್ತರಿಂದ ಬಿಡುಗಡೆಗೊಂಡಿರುವ ಪ್ಯಾರಡೈಸ್ ಪೇಪರ್ಸ್'ನಲ್ಲಿ ಭಾರತದಿಂದ ಒಟ್ಟು ವಿವಿಧ ಕ್ಷೇತ್ರದ 714 ಮಂದಿ ಹಾಗೂ 700 ಪ್ರತಿಷ್ಠಿತ ಕಂಪನಿಗಳು ತೆರಿಗೆ ವಂಚಿಸಿರುವ ಮಾಹಿತಿ ಬಹಿರಂಗವಾಗಿದೆ.
ಭಾರತೀಯರ ಪಟ್ಟಿಯಲ್ಲಿ ಸಾವಿರಾರು ಕೋಟಿ ರೂ. ಬ್ಯಾಂಕ್'ಗಳಿಗೆ ವಂಚಿಸಿ ದೇಶದಿಂದ ಪರಾರಿಯಾಗಿರುವ ದ್ಯಮಿ ವಿಜಯ್ ಮಲ್ಯ, ಕೇಂದ್ರ ಸಚಿವ ಜಯಂತ್ ಸಿನ್ಹಾ, ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಕಾರ್ಪೋರೇಟ್ ಲಾಬಿಗಾರ್ತಿ ನೀರಾ ರಾಡಿಯಾ, ನಟ ಸಂಜಯ್ ದತ್ ಪತ್ನಿ ಮಾನ್ಯತಾ ದತ್, ಆಂದ್ರ ಪ್ರದೇಶದ ವೈಎಸ್'ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ರೆಡ್ಡಿ ಸೇರಿದಂತೆ ಮುಂತಾದವರ ಹೆಸರಿದೆ.
ಖ್ಯಾತ ನಾಮರಲ್ಲದೆ ಸನ್ ಟಿವಿ, ಅಪೋಲೊ ಟೈರ್ಸ್, ಹ್ಯಾವೆಲ್ಸ್, ಹಿಂದುಜಾಸ್, ಎಮಾರ್ ಎಂಜಿಎಫ್, ವಿಡಿಯೋಕಾನ್ ನಂತಹ ಪ್ರತಿಷ್ಠಿತ ಹೆಸರುಗಳು ಉಲ್ಲೇಖವಾಗಿವೆ.
ಮೊಯ್ಲಿ ಪುತ್ರನ ಹೆಸರು
ಪ್ಯಾರಡೈಸ್ ಪಟ್ಟಿಯಲ್ಲಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿಯ ಹೆಸರು ಇದೆ. ಮೊಯ್ಲಿಯವರು ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದಾಗ ಕಂಪನಿಯೊಂದನ್ನು ಸ್ಥಾಪಿಸಿದ್ದರು. ಆ ಕಂಪನಿಗೆ ತೆರಿಗೆದಾರರ ಸ್ವರ್ಗ ದೇ ಹೆಸರಾಗಿರುವ ಮಾರಿಷಸ್'ನ ಯೂನಿಟಸ್ ಇಂಪ್ಯಾಕ್ಟ್ ಪಿಸಿಸಿ ಎಂಬ ಕಂಪನಿ ಬಂಡವಾಳ ಹೂಡಿತ್ತು. ಮೊಯ್ಲಿ ಪುತ್ರನ ಕಂಪನಿಯ ಹೆಸರು ಮೋಕ್ಷ್ ಯುಗ್ ಆಕ್ಸ್ಸ್ ಪ್ರೈವೇಟ್ ಲಿಮಿಟೆಡ್ ಆಗಿದೆ. ಅದು ಗ್ರಾಮೀಣ ಪ್ರದೇಶದಲ್ಲಿ ಸರಕು ಸಾಗಣೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಈ ಕಂಪನಿಯ ಬಗ್ಗೆ ಮಾತನಾಡಿರುವ ಅವರು ರೈತರ ಅಭ್ಯುದಯಕ್ಕಾಗಿ ಇದನ್ನು ಸ್ಥಾಪಿಸಲಾಗಿದೆ. ನಮ್ಮ ತಂದೆಯ ಯಾವುದೇ ಪ್ರಭಾವ ಬಳಸಿಲ್ಲ ಎಂದು ತಿಳಿಸಿದ್ದಾರೆ.
