ಸಿಎಂ ಗದ್ದುಗೆ ಏರುವ ಕನಸು ಕಂಡಿದ್ದ ಶಶಿಕಾಲಾಗೆ ಇದೀಗ ಪನ್ನೀರ್ ಸೆಲ್ವಂ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಜಯಲಲಿತಾ ನಿವಾಸ ಫೋಯಸ್ ಗಾರ್ಡ್'ನನ್ನು 'ಜಯಾ' ಸ್ಮಾರಕ ಎಂದು ಘೋಷಿಸಲು ನಿರ್ಧರಿಸುವ ಮೂಲಕ ಚಿನ್ನಮ್ಮನಿಗೆ ತಿರುಗೇಟು ನೀಡಿದ್ದಾರೆ.
ಚೆನ್ನೈ(ಫೆ.09): ಸಿಎಂ ಗದ್ದುಗೆ ಏರುವ ಕನಸು ಕಂಡಿದ್ದ ಶಶಿಕಾಲಾಗೆ ಇದೀಗ ಪನ್ನೀರ್ ಸೆಲ್ವಂ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಜಯಲಲಿತಾ ನಿವಾಸ ಫೋಯಸ್ ಗಾರ್ಡ್'ನನ್ನು 'ಜಯಾ' ಸ್ಮಾರಕ ಎಂದು ಘೋಷಿಸಲು ನಿರ್ಧರಿಸುವ ಮೂಲಕ ಚಿನ್ನಮ್ಮನಿಗೆ ತಿರುಗೇಟು ನೀಡಿದ್ದಾರೆ.
ಇನ್ನು ಪನ್ನೀರ್ ಸೆಲ್ವಂ ನಿರ್ಧಾರ ಜಾರಿಯಾಗಿ ಫೋಯಸ್ ಗಾರ್ಡನ್ ಜಯಾ ಸ್ಮಾರಕ ಎಂದು ಘೋಷಣೆಯಾದರೆ, ಶಶಿಕಲಾ ಆನಿವಾಸವನ್ನು ತೊರೆಯಬೇಕಾಗುತ್ತದೆ. ಈ ಮೂಲಕ ಶಶಿಕಲಾರನ್ನು ಜಯಾ ನಿವಾಸದಿಂದ ಹೊರಹಾಕಲು ಸಿಎಂ ಪನ್ನೀರ್ ಸೆಲ್ವಂ ತಂತ್ರ ಹೆಣೆದಿದ್ದಾರೆ.
ಇಷ್ಟೇ ಅಲ್ಲದೆ ತಮಿಳುನಾಡಿನಲ್ಲಿ ಪನ್ನೀರ್ ಸೆಲ್ವಂ Vs ಶಶಿಕಲಾ ರಾಜಕಾರಣ ತಾರಕಕ್ಕೇರಿದೆ. ಪನ್ನೀರ್ ಬೆಂಬಲಿಗರು ADIAMK ಶಾಸಕರ ಫೋನ್ ನಂಬರ್'ನ್ನು ಸಾರ್ವಜನಿಕರಿಗೆ ಹಂಚಿದ್ದು, ಶಾಸಕರಿಗೆ ಕರೆ ಮಾಡಿ ಪನ್ನೀರ್ ಸೆಲ್ವಂ ಪರ ಜನರಿಂದಲೇ ಒತ್ತಡ ಹಾಕುವಂತೆ ಮಾಡಿದ್ದಾರೆ. ಈ ಮೂಲಕ ಶಶಿಕಲಾ ಜೊತೆ ಗುರುತಿಸಿಕೊಂಡಿದ್ದ 130 ಶಾಸಕರಲ್ಲಿ ಒಡಕಾಗಿದೆ. ಕೊಲ್ಲಾಚಿ, ಕೊಯಮುತ್ತೂರು, ADIAMK ನಾಯಕರು ಈಗ ಸೆಲ್ವಂ ಬೆಂಬಲಕ್ಕೆ ನಿಂತಿದ್ದಾರೆ ಹಾಗೂ ಸಾಮಾಜಿಕ ಜಾಲಾತಾಣಗಳಾದ ಫೇಸ್'ಬುಕ್, ಟ್ವಿಟರ್ಪನ್ನೀರ್ ಪರ ಅಭಿಯಾನ ಜೋರಾಗಿದೆ.
