ಹಂಗಾಮಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರ ಮಧ್ಯೆ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿರುವಾಗಲೇ ಸಿಎಂ ಯಾರಾಗಬೇಕು ಎಂಬ ಕುರಿತು ಸಮೀಕ್ಷೆಯೊಂದನ್ನು ಕೈಗೊಳ್ಳಲಾಗಿದೆ.
ಚೆನ್ನೈ(ಫೆ.09): ತಮಿಳುನಾಡಿನಲ್ಲಿ ನಿಯೋಜಿತ ಮುಖ್ಯಮಂತ್ರಿ ಶಶಿಕಲಾ ಮತ್ತು ಹಂಗಾಮಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರ ಮಧ್ಯೆ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿರುವಾಗಲೇ ಸಿಎಂ ಯಾರಾಗಬೇಕು ಎಂಬ ಕುರಿತು ಸಮೀಕ್ಷೆಯೊಂದನ್ನು ಕೈಗೊಳ್ಳಲಾಗಿದೆ. ಟ್ವೀಟರ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.95ರಷ್ಟು ಮಂದಿ ಪನ್ನೀರ್ ಸೆಲ್ವಂ ಅವರು ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ. ಶೇ.5ರಷ್ಟು ಮಂದಿ ಮಾತ್ರ ಶಶಿಕಲಾ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ. ಈ ಸಮೀಕ್ಷೆಯಲ್ಲಿ 52,876 ಮಂದಿ ಭಾಗಿಯಾಗಿದ್ದರು.
