ರಾಜ್ಯಸಭಾ ಸದಸ್ಯ ವಿ.ಮೈತ್ರೇಯನ್ ನೇತೃತ್ವದಲ್ಲಿ 12 ಮಂದಿ ಸಂಸದರ ನಿಯೋಗ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ಈ ಸಂಬಂಧ ಮನವಿಯೊಂದನ್ನು ಸಲ್ಲಿಸಿದ್ದಾರೆ. ನ್ಯಾಯಾಂಗ ಅಥವಾ ಸಿಬಿಐ ತನಿಖೆ ನಡೆಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ನವದೆಹಲಿ(ಫೆ.28): ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಾವಿನ ಸುತ್ತ ಇರುವ ಸಂದೇಹಗಳ ಕುರಿತು ತನಿಖೆ ನಡೆಸಲು ಮಧ್ಯ ಪ್ರವೇಶಿಸುವಂತೆ ಎಐಎಡಿಎಂಕೆ ಬಂಡಾಯ ನಾಯಕ ಪನ್ನೀರ್‌ಸೆಲ್ವಂ ಬೆಂಬಲಿಗ ಸಂಸದರು ಒತ್ತಾಯಿಸಿದ್ದಾರೆ.
ರಾಜ್ಯಸಭಾ ಸದಸ್ಯ ವಿ.ಮೈತ್ರೇಯನ್ ನೇತೃತ್ವದಲ್ಲಿ 12 ಮಂದಿ ಸಂಸದರ ನಿಯೋಗ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ಈ ಸಂಬಂಧ ಮನವಿಯೊಂದನ್ನು ಸಲ್ಲಿಸಿದ್ದಾರೆ. ನ್ಯಾಯಾಂಗ ಅಥವಾ ಸಿಬಿಐ ತನಿಖೆ ನಡೆಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಮನವಿಯಲ್ಲಿ ವಿನಂತಿಸಲಾಗಿದೆ. ಡಿಸೆಂಬರ್‌ನಲ್ಲಿ ಜಯಲಲಿತಾ ನಿಧನರಾದ ಬಳಿಕ ಅವರ ಸಾವಿನ ಬಗ್ಗೆ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಸಂದೇಹಗಳಿವೆ. ವಿಷಯವನ್ನು ಕೈಗೆತ್ತಿಕೊಂಡು, ಸತ್ಯವನ್ನು ಬಹಿರಂಗ ಪಡಿಸಲು ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ಆದೇಶಿಸುವಂತೆ ವಿನಂತಿಸಿದ್ದೇವೆ ಎಂದು ಮೈತ್ರೇಯನ್ ಹೇಳಿದ್ದಾರೆ. ಸಂದೇಹವನ್ನು ನಿವಾರಿಸುವುದೇ ಅಮ್ಮಾಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಅವರು ಪ್ರತಿಪಾದಿಸಿದ್ದಾರೆ.
