ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ. ಪನ್ನೀರ್’ಸೆಲ್ವಂ ಹಾಗೂ ಪ್ರಧಾನಿ ಮೋದಿ ಇಂದು ನವದೆಹಲಿಯಲ್ಲಿ ಮಾತುಕತೆ ನಡೆಸಿದ್ದು, ಎಐಡಿಎಂಕೆ 2 ಬಣಗಳ ವಿಲೀನದ ಕುರಿತಂತೆ ಚರ್ಚಿಸಿದ್ದಾರೆ. ಜಯಾಲಲಿತ ವಿಧಿವಶವಾದ ಬಳಿಕ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ಎಐಡಿಎಂಕೆ ಎರಡು ಹೋಳಾಗಿದ್ದು, ಒಂದು ಬಣವನ್ನು ಓ.ಪನ್ನೀರ್’ಸೆಲ್ವಂ ಮುನ್ನಡೆಸಿದರೆ, ಇನ್ನೊಂದರ ನೇತೃತ್ವವನ್ನು ತಮಿಳುನಾಡು ಮುಖ್ಯಮಂತ್ರಿ ಇ,ಕೆ. ಪಳನಿಸ್ವಾಮಿ ವಹಿಸಿದ್ದಾರೆ.

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ. ಪನ್ನೀರ್’ಸೆಲ್ವಂ ಹಾಗೂ ಪ್ರಧಾನಿ ಮೋದಿ ಇಂದು ನವದೆಹಲಿಯಲ್ಲಿ ಮಾತುಕತೆ ನಡೆಸಿದ್ದು, ಎಐಡಿಎಂಕೆ 2 ಬಣಗಳ ವಿಲೀನದ ಕುರಿತಂತೆ ಚರ್ಚಿಸಿದ್ದಾರೆ.

ಜಯಾಲಲಿತ ವಿಧಿವಶವಾದ ಬಳಿಕ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ಎಐಡಿಎಂಕೆ ಎರಡು ಹೋಳಾಗಿದ್ದು, ಒಂದು ಬಣವನ್ನು ಓ.ಪನ್ನೀರ್’ಸೆಲ್ವಂ ಮುನ್ನಡೆಸಿದರೆ, ಇನ್ನೊಂದರ ನೇತೃತ್ವವನ್ನು ತಮಿಳುನಾಡು ಮುಖ್ಯಮಂತ್ರಿ ಇ,ಕೆ. ಪಳನಿಸ್ವಾಮಿ ವಹಿಸಿದ್ದಾರೆ.

ಸುಮಾರು 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ, ರಾಜ್ಯಸಭೆ ಸಂಸದ ವಿ.ಮೈತ್ರೇಯಂ ಹಾಗೂ ಮಾಜಿ ಸಂಸದ ಮನೋಜ್ ಪಾಂಡ್ಯನ್ ಕೂಡಾ ಉಪಸ್ಥಿತರಿದ್ದರು.

ಎಐಡಿಎಂಕೆ 2 ಬಣಗಳ ವಿಲೀನ ಹಾಗೂ ನೀಟ್ ಪರೀಕ್ಷೆಗೆ ಸಂಬಂಧಿಸಿದ ವಿಚಾರಗಳನ್ನು ಪ್ರಮುಖವಾಗಿ ಚರ್ಚಿಸಲಾಯಿತು ಎಂದು ಮೈತ್ರೇಯನ್ ಹೇಳಿದ್ದಾರೆ.

ಕಳೆದ ಶುಕ್ರವಾರ ಪಳನಿಸ್ವಾಮಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಪನ್ನೀರ್’ಸೆಲ್ವಂ ಕೂಡಾ ಆ ಅಭೆಯಲ್ಲಿ ಭಾಗವಹಿಸುವವರಿದ್ದರು, ಆದರೆ ಕಾರಣಾಂತರಗಳಿಂದ ಆ ಸಭೆ ನಡೆದಿರಲಿಲ್ಲ.