Asianet Suvarna News Asianet Suvarna News

ಆರೆಸ್ಸೆಸ್ ರ್ಯಾಲಿಯಲ್ಲಿ ಮಕ್ಕಳ ಕೈಯಲ್ಲಿ ಖಡ್ಗ; ವರದಿ ಕೇಳಿದ ಆಯೋಗ

ರಾಮನವಮಿ ದಿನದಂದು ಆರೆಸ್ಸೆಸ್ ಹಮ್ಮಿಕೊಂಡಿದ್ದ ಮೆರವಣಿಗೆಗಳಲ್ಲಿ ಮಕ್ಕಳ ಕೈಯಲ್ಲಿ ಖಡ್ಗಗಳನ್ನು ಹಿಡಿದು ಸಾಗುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

Panel unhappy as children carry arms during RSS rally

ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ.ಬಂಗಾಳದ ಬಿರ್ಹೂಮ್’ನಲ್ಲಿ ಕಳೆದ ರಾಮನವಮಿಯಂದು ಆಯೋಜಿಸಿದ್ದ ಮೆರವಣಿಗೆಯಲ್ಲಿ ಮಕ್ಕಳ ಕೈಗೆ ಖಡ್ಗಗಳನ್ನು ಕೊಟ್ಟಿರುವುದರ ಬಗ್ಗೆ  ಮಕ್ಕಳ ಆಯೋಗವು ವರದಿಯನ್ನು ಕೇಳಿದೆ.

ಘಟನೆಗೆ ಸಂಬಂಧಿಸಿದಂತೆ ವರದಿ ಕಳುಹಿಸುವಂತೆ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗೆ ಸೂಚಿಸಲಾಗಿದೆಯೆಂದು ರಾಜ್ಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗದ ಅಧ್ಯಕ್ಷೆ ಅನನ್ಯ ಚಟರ್ಜಿ ಹೇಳಿದ್ದಾರೆಂದು ದಿ ಹಿಂದೂ ವರದಿ ಮಾಡಿದೆ.

ರಾಮನವಮಿ ದಿನದಂದು ಆರೆಸ್ಸೆಸ್ ಹಮ್ಮಿಕೊಂಡಿದ್ದ ಮೆರವಣಿಗೆಗಳಲ್ಲಿ ಮಕ್ಕಳ ಕೈಯಲ್ಲಿ ಖಡ್ಗಗಳನ್ನು ಹಿಡಿದು ಸಾಗುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಆರೆಸ್ಸೆಸ್ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದ ಪ.ಬಂಗಾಳದ ನಾಗರಿಕ ಗುಂಪುಗಳು ಹಾಗೂ ರಾಜಕೀಯ ಪಕ್ಷಗಳು,  ಪ.ಬಂಗಾಳದಲ್ಲಿ ಯಾವ ಸಂಸ್ಕೃತಿಯನ್ನು ಆರೆಸ್ಸೆಸ್ ಹುಟ್ಟುಹಾಕಬಯಸುತ್ತದೆ ಎಂದು ಪ್ರಶ್ನಿಸಿದ್ದರು.

ಆದರೆ ಆರೆಸ್ಸೆಸ್ ಕ್ರಮವನ್ನು ಸಮರ್ಥಿಸಿರುವ ಬಿಜೆಪಿ, ಖಡ್ಗ ಹಾಗೂ ಚಾಕುಗಳನ್ನು ಶಸ್ತ್ರಾಸ್ತ್ರಗಳಾಗಿ ಪರಿಗಣಿಸುವಂತಿಲ್ಲವೆಂದು ಹೇಳಿದೆ.

(ಚಿತ್ರಕೃಪೆ: ಹಿಂದೂಸ್ತಾನ್ ಟೈಮ್ಸ್)

Follow Us:
Download App:
  • android
  • ios