ನಿಮಗಾಗಿ ಪಾಲಕ ಸೊಪ್ಪಿನ ಚಾಟ್ ಇಲ್ಲಿದೆ.
ಸಂಜೆ ಸಮಯದಲ್ಲಿ ಏನಾದರೂ ವಿಶೇಷ ತಿನಿಸು ಮಾಡಿ ತಿನ್ನುವ ಬಯಕೆಯಾದರೆ ನಿಮಗಾಗಿ ಪಾಲಕ ಸೊಪ್ಪಿನ ಚಾಟ್ ಇಲ್ಲಿದೆ. ಉತ್ತರ ಭಾರತದ ವಿಶೇಷ ಖಾದ್ಯವಾದ ಇದನ್ನು ಮಕ್ಕಳು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದರೆ ಆರೋಗ್ಯಕ್ಕೆ ಒಳ್ಳೆಯದಾದ ಈ ಸ್ಯ್ನಾಕ್ಸ್ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಪಾಲಕ್ ಎಲೆಗಳು, ಕಡಲೆಹಿಟ್ಟು, ಉಪ್ಪು, ಕಾಳುಮೆಣಸು, ಸಿಹಿ ಮೊಸರು, ಹುಣಸೆ ಹಣ್ಣಿನ ರಸ, ಪುದಿನಾ ಚಟ್ನಿ, ಸೋಂಪು ಕಾಳುಗಳು.
ಮಾಡುವ ವಿಧಾನ:
ತಾಜಾ ಪಾಲಕ್ ಎಲೆಗಳನ್ನು ತೆಗೆದುಕೊಂಡು ಕತ್ತರಿಸಿ, ಸ್ವಲ್ಪ ಕಡಲೆ ಹಿಟ್ಟಿನೊಂದಿಗೆ ಬೆರೆಸಿ, ರುಚಿಗೆ ಉಪ್ಪು, ಕಾಳುಮೆಣಸಿನ ಪುಡಿ, ಸಿಹಿ ಮೊಸರು, ಸೋಂಪು ಕಾಳುಗಳು, ಹುಣಸೆ ರಸ, ಸೇರಿಸಿ ಅದಕ್ಕೆ ನೀರು ಸೇರಿಸಿ ಮಿಶ್ರ ಮಾಡಿ. ನಂತರ ಅದನ್ನು ಎಣ್ಣೆಯಲ್ಲಿ ಅಂಬೊಡೆಯಂತೆ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿದರೆ ಪುದಿನಾ ಚಟ್ನಿಯೊಂದಿಗೆ ರುಚಿಯಾದ ಪಾಲಕ್ ಚಾಟ್ ಸವಿಯಲು ಸಿದ್ದ.
