ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ಇಬ್ಬರು ಮಹಿಳೆಯರು ಯತ್ನಿಸುತ್ತಿದ್ದು, ಈ ಇಬ್ಬರು ದೇಗುಲ ಪ್ರವೇಶಿಸಿದಲ್ಲಿ ಗರ್ಭಗುಡಿಯನ್ನು ಮುಚ್ಚಲಾಗುವುದು ಎಂದು ದೇಗುಲದ ಪ್ರಧಾನ ತಂತ್ರಿ ಹೇಳಿದ್ದಾರೆ. 

ಶಬರಿಮಲೆ : ಶಬರಿಮಲೆ ದೇಗುಲಕ್ಕೆ ಪ್ರವೇಶ ಬಯಸಿ ಇಬ್ಬರು ಮಹಿಳೆಯರು 300ಕ್ಕೂ ಅಧಿಕ ಮಂದಿ ಸೇನಾ ಪಡೆ ಸಿಬ್ಬಂದಿ ಭದ್ರತೆಯೊಂದಿಗೆ ತೆರಳುತ್ತಿದ್ದಾರೆ. 

ರೆಹನಾ ಫಾತಿಮಾ ಎಂಬ ಮುಸ್ಲಿಂ ಮಹಿಳೆ ಹಾಗೂ ಆಂಧ್ರ ಪ್ರದೇಶದ ಪತ್ರಕರ್ತೆ ಕವಿತಾ ಭದ್ರತೆಯೊಂದಿಗೆ ದೇಗುಲ ಪ್ರವೇಶಕ್ಕಾಗಿ ತೆರಳುತ್ತಿದ್ದಾರೆ.

ಆದರೆ ಒಂದು ವೇಳೆ ಅವರು ದೇವಾಲಯವನ್ನು ಪ್ರವೇಶ ಮಾಡಿದಲ್ಲಿ ದೇಗುಲದ ಗರ್ಭಗುಡಿಯನ್ನು ಮುಚ್ಚಲಾಗುವುದು ಎಂದು ಪ್ರಧಾನ ತಂತ್ರಿ ಹೇಳಿದ್ದಾರೆ.

ದೇವಾಲಯದಲ್ಲಿ ಅನೇಕ ವರ್ಷಗಳಿಂದಲೂ ಕೂಡ ಆಚಾರ ವಿಚಾರಗಳು ನಡೆದುಕೊಂಡು ಬಂದಿದ್ದು, ಇವುಗಳಿಗೆ ಅಪಚಾರವಾಗಿ ಮಹಿಳೆ ಪ್ರವೇಶ ನಡೆದಲ್ಲಿ, ಅಥವಾ ಯಾವುದೇ ರೀತಿಯ ಗಲಾಟೆಗಳು ನಡೆದಲ್ಲಿ ದೇಗುಲವನ್ನು ಮುಚ್ಚಲಾಗುವುದು ಎಂದು ದೇಗುಲದ ಪ್ರಧಾನ ತಂತ್ರಿ ಕಂಡಿರ್ ರಾಜೀವರ್ ಹೇಳಿದ್ದಾರೆ. 

ದೇಗುಲದ ಆಚಾರ ವಿಚಾರಗಳಿಗೆ ವಿರುದ್ಧವಾಗಿ ಯಾರೇ ನಡೆದುಕೊಂಡರೂ ಸರಿ ಗರ್ಭಗುಡಿಗೆ ಅಪಚಾರವಾಗುತ್ತದೆ ಎಂದು ಹೇಳಿದ್ದಾರೆ.