ಮುಂಬೈ(ಸೆ.25): ಭಾರತೀಯರ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದುದಕ್ಕಾಗಿ ಪಾಕ್ ಮೂಲದ ನಟ ಮಾರ್ಕ್ ಅನ್ವರ್‌ರನ್ನು ಬ್ರಿಟನ್‌ನ ಜನಪ್ರಿಯ ಟಿವಿ ಕಾರ್ಯಕ್ರಮವೊಂದರಿಂದ ಕೈಬಿಡಲಾಗಿದೆ. ಜಗತ್ತಿನ ಅತಿ ದೀರ್ಘಕಾಲೀನ ಟಿವಿ ದಾರಾವಾಹಿ ‘ಕರೋನೇಶನ್ ಸ್ಟ್ರೀಟ್’ನಲ್ಲಿ ಮಾರ್ಕ್ ಅನ್ವರ್ 2014ರಿಂದ ನಟಿಸುತ್ತಿದ್ದರು. ತನ್ನ ಟ್ವಿಟ್ಟರ್ ಖಾತೆಯಲ್ಲಿ ಅನ್ವರ್ ಪ್ರಕಟಿಸಿದ್ದ ಸಂದೇಶದ ಬಗ್ಗೆ ‘ಸಂಡೇ ಮಿರರ್’ ಸುದ್ದಿ ಪತ್ರಿಕೆ ಪ್ರಕಟಿಸಿತ್ತು. ಮಾರ್ಕ್ ಅನ್ವರ್ ಟ್ವಿಟ್ಟರ್‌ನಲ್ಲಿ ಸಂಪೂರ್ಣ ಅಸ್ವೀಕಾರಾರ್ಹವಾದ, ಜನಾಂಗೀಯ ನಿಂದನೆ ಹೇಳಿಕೆ ನೋಡಿ, ತೀವ್ರ ಆಘಾತಕ್ಕೊಳಗಾದೆವು. ನಾವು ಅನ್ವರ್ ಜೊತೆ ಮಾತನಾಡಿದ್ದೇವೆ. ಹೀಗಾಗಿ ತಕ್ಷಣದಿಂದಲೇ ಅವರು ’ಕೊರೊನೇಶನ್ ಸ್ಟ್ರೀಟ್’ಗೆ ಮರಳುವುದಿಲ್ಲ ಎಂದು ಐಟಿವಿ ವಕ್ತಾರ ತಿಳಿಸಿದ್ದಾರೆ.
ಭಾರತೀಯರನ್ನು ನಿಂದಿಸಿದ ಪಾಕ್ ನಟ ಹೊರಕ್ಕೆ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos
