ಕರಾಚಿ(ಅ.06): ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರ ದಾಳಿ ನಡೆದಿರುವಂತೆಯೇ ಇತ್ತ ಪಾಕ್ ಸರ್ಕಾರ ಉಗ್ರ ವಿರುದ್ಧ ಕ್ರಮಕೈಗೊಳ್ಳಿ ಎಂದು ಗೌಪ್ಯವಾಗಿ ಸೈನಿಕರಿಗೆ ಸೂಚಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉರಿ ಉಗ್ರ ದಾಳಿ ಬಳಿಕ ಭಾರತದಿಂದ ಮೂಲೆಗುಂಪಾಗಿರುವ ಪಾಕಿಸ್ತಾನ, ಇದೀಗ ಪಾಕಿಸ್ತಾನ ದೇಶಕ್ಕೆ ಕಪ್ಪು ಚುಕ್ಕೆಯಂತಾಗಿರುವ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೈನಿಕರಿಗೆ ಸೂಚನೆ ನೀಡಿದೆ ಎಂದು ಪಾಕ್ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ. 

ಪಾಕ್ ಪ್ರಧಾನಿ ನವಾಜ್ ಷರೀಫ್, ನಿನ್ನೆ ಸಂಜೆ ಸರ್ಕಾರದ ಉನ್ನತಾಧಿಕಾರಿಳೊಂದಿಗೆ ಗೌಪ್ಯ ಸಭೆ ನಡೆಸಿದ್ದು, ಈ ವೇಳೆ ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ವರದಿ ಮಾಡಿದೆ.