ಜೈಪುರ[ಫೆ.21]: ಇಲ್ಲಿನ ಸೆಂಟ್ರಲ್‌ ಜೈಲಿನಲ್ಲಿ ಇತರ ಕೈದಿಗಳ ಜೊತೆ ಟೀವಿ ವಾಲ್ಯೂಮ್‌ ಇಡುವ ಸಂಬಂಧ ನಡೆದ ಕಾಳಗದಲ್ಲಿ ಪಾಕಿಸ್ತಾನದ ಕೈದಿಯೊಬ್ಬ ಹತ್ಯೆಗೀಡಾಗಿರುವ ಘಟನೆ ಬುಧವಾರ ನಡೆದಿದೆ. 

ಪಾಕಿಸ್ತಾನದ ಪಂಜಾಬ್‌ನ ಸಿಲಾಲ್‌ಕೋಟ್‌ ಮೂಲದ ಶಕ್ರುಲ್ಲಾ (50) ಎಂಬಾತ ಹತ್ಯೆಗೀಡಾದ ಕೈದಿಯಾಗಿದ್ದಾನೆ. ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವಾಗಲೇ ಈ ಘಟನೆ ವರದಿಯಾಗಿದೆ.

ಕಂದಹಾರ್‌ ಅಪಹರಣಕಾರನಿಂದ ಪುಲ್ವಾಮಾ ದಾಳಿಕೋರನಿಗೆ ತರಬೇತಿ

ಟೀವಿ ವಾಲ್ಯೂಮ್‌ ಇಡುವ ಸಂಬಂಧ ಜೈಲಿನಲ್ಲಿ ನಡೆದ ಕಾಳಗದ ವೇಳೆ ದೊಡ್ಡದಾದ ಕಲ್ಲಿನಿಂದ ಶಕ್ರುಲ್ಲಾ ಮೇಲೆ ಹಲ್ಲೆ ನಡೆಸಲಾಗಿದೆ. ಈ ಪ್ರಕರಣವನ್ನು ಪೊಲೀಸ್‌ ಹಾಗೂ ನ್ಯಾಯಾಂಗ ಮ್ಯಾಜಿಸ್ಪ್ರೇಟ್‌ ತನಿಖೆಗೆ ಒಳಪಡಿಸಲಾಗುವುದು ಎಂದು ರಾಜಸ್ಥಾನ ಪೊಲೀಸ್‌ ಮಹಾ ನಿರ್ದೇಶಕ ಕಪಿಲ್‌ ಗರ್ಗ್‌ ಹೇಳಿದ್ದಾರೆ. 

ಹತ್ಯೆಯಾದ ಪಾಕ್‌ ಕೈದಿ ಶಕ್ರುಲ್ಲಾ ಕಾನೂನು ಬಾಹಿರ ಚಟುವಟಿಕೆಯಿಂದಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಈತನನ್ನು 2011ರಿಂದ ಸೆಂಟ್ರಲ್‌ ಜೈಲಿನ ವಿಶೇಷ ಕೋಣೆಯಲ್ಲಿ ಇರಿಸಲಾಗಿತ್ತು.