303 ಪ್ರಯಾಣಿಕ ಜೀವವನ್ನು ಅಪಾಯಕ್ಕೆ ತಳ್ಳಿ ಬಿಸಿನೆಸ್ ಕ್ಲಾಸ್ ಕ್ಯಾಬಿನ್ ಸೀಟಿನಲ್ಲಿ ಬರೋಬ್ಬರಿ ಎರಡೂವರೆ ಗಂಟೆ ನಿದ್ದೆ ಹೊಡೆದಿದ್ದಾನೆ

ಇಸ್ಲಾಮಾಬಾದ್(ಮೇ.07): ವಿಮಾನದಲ್ಲಿ ಪ್ರಯಾಣಿಕರನ್ನು ನಿಲ್ಲಿಸಿಕೊಂಡು ಕರೆದೊಯ್ದ ಕಾರಣಕ್ಕೆ ನಗೆಪಾಟಲಗೀಡಾಗಿದ್ದ ಪಾಕಿಸ್ತಾನ ಏರ್‌ಲೈನ್ಸ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಇಸ್ಲಾಮಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ವಿಮಾನದ ಪೈಲಟ್, 303 ಪ್ರಯಾಣಿಕ ಜೀವವನ್ನು ಅಪಾಯಕ್ಕೆ ತಳ್ಳಿ ಬಿಸಿನೆಸ್ ಕ್ಲಾಸ್ ಕ್ಯಾಬಿನ್ ಸೀಟಿನಲ್ಲಿ ಬರೋಬ್ಬರಿ ಎರಡೂವರೆ ಗಂಟೆ ನಿದ್ದೆ ಹೊಡೆದಿದ್ದಾನೆ. ಪೈಲಟ್ ಅಮೀರ್ ಅಖ್ತರ್ ಹಸ್ಮಿ ಎಂಬಾತ ವಿಮಾನ ಟೇಕ್ ಆ್ ಆಗುತ್ತಿದ್ದಂತೆ ವಿಮಾನದ ನಿಯಂತ್ರಣವನ್ನು ಟ್ರೇನಿ ಪೈಲಟ್ ಕೈಗೆಕೊಟ್ಟು ನಿದ್ದೆಗೆ ಜಾರಿದ್ದಾನೆ. ಪೈಲಟ್ ನಿದ್ದೆ ಮಾಡುತ್ತಿರುವ ಚಿತ್ರವನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಲ್ಲದೇ ಹಿರಿಯ ಅಕಾರಿಗಳಿಗೆ ದೂರು ನೀಡಿದ್ದರು. ಪೈಲಟ್ ತನ್ನ ಅಜಾಗರೂಕತೆಗೆ ಬೆಲೆ ತೆತ್ತಿದ್ದು, ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ) ಆತನನ್ನು ಕೆಲಸದಿಂದ ತೆಗೆದುಹಾಕಿದೆ. ಕಿರಿಯ ಪೈಲಟ್‌ಗಳಿಗೆ ತರಬೇತಿ ನೀಡಲು ಪೈಲಟ್ ತಿಂಗಳಿಗೆ 1,00,000 ರು.ವೇತನ ಪಡೆಯುತ್ತಿದ್ದ.