ರಕ್ಷಾ ಬಂಧನ, ಅಣ್ಣ -ತಂಗಿಯರ ಸಂಬಂಧ ದೇಶ-ಭಾಷೆ ಗಡಿ ಎಲ್ಲವನ್ನು ಮೀರಿದ್ದು ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ

ನವದೆಹಲಿ (ಆ.27) ದೇಶದಲ್ಲಿ ರಕ್ಷಾ ಬಂಧನ ಸಂಭ್ರಮಾಚರಣೆ ನಡೆಯುತ್ತಿರುವ ನಡುವೆ, ಪ್ರಧಾನಿ ನರೇಂದ್ರ ಮೋದಿ ಯವರಿಗೆ ಪಾಕಿಸ್ತಾನಿ ಮೂಲದ ಸಹೋದರಿಯೊಬ್ಬರು ರಾಖಿ ಕಟ್ಟಿಸಂಭ್ರಮಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 22-23 ವರ್ಷಗಳಿಂದ ಖಮರ್ ಮೊಹ್ಸೀನ್ ಶೇಖ್ ಮೋದಿಗೆ ರಾಖಿ ಕಟ್ಟುತ್ತಿದ್ದರು. ಈ ಬಾರಿಯೂ ಭಾನುವಾರ ಖಮರ್ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿ ರಾಖಿ ಕಟ್ಟಿದ್ದಾರೆ. ‘ನರೇಂದ್ರ ಭಾಯಿಯವರಿಗೆ 22-23 ವರ್ಷಗಳಿಂದಲೂ ರಾಖಿ ಕಟ್ಟುತ್ತಿದ್ದೇನೆ. ಈ ವರ್ಷ ಪ್ರಧಾನಿಯವರು ಬ್ಯುಸಿ ಇರಬಹುದೆಂದು ಅಂಕೊಂಡಿದ್ದೆ. ಆದರೆ,ಎರಡು ದಿನಗಳ ಹಿಂದೆ ಅವರೇ ನನಗೆ ಕರೆ ಮಾಡಿದರು. ನಾನು ತುಂಬಾ ಸಂತೋಷದಿಂದ ರಕ್ಷಾ ಬಂಧನಕ್ಕೆ ಸಿದ್ಧಳಾದೆ’ ಎಂದು ಖಮರ್ ಹೇಳಿದ್ದಾರೆ.

ಖಮರ್ ವಿವಾಹವಾದ ಬಳಿಕ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿ, ಇಲ್ಲೇ ನೆಲೆಸಿದ್ದಾರೆ. ಮೋದಿ ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾಗಿಂದ ರಕ್ಷಾ ಬಂಧನ ಕಟ್ಟುತ್ತಿದ್ದಖಮರ್, ಅವರು ಪ್ರಧಾನಿಯಾದ ನಂತರವೂ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.