Asianet Suvarna News Asianet Suvarna News

ಹಫೀಜ್ ಸಯ್ಯದ್ ಬಂಧನ : ಪಾಕ್'ನಲ್ಲಿ ಪ್ರತಿಭಟನೆ

ಭಾರತ ಹಾಗೂ ಅಮೆರಿಕಾ ಎರಡೂ ದೇಶಗಳಿಗೂ ಬೇಕಾದ ಕುಖ್ಯಾತ ಅಪರಾಧಿಯಾಗಿದ್ದಾನೆ.  ಈತನನ್ನು ಹಿಡಿದುಕೊಟ್ಟವರಿಗಾಗಿ ಅಮೆರಿಕಾ ಸರ್ಕಾರ 1 ಕೋಟಿ ಡಾಲರ್ ಬಹುಮಾನ ಘೋಷಿಸಿದೆ.

Pakistani Islamic charity holds protests after Hafiz Saeeds detention

ಇಸ್ಲಾಮಾಬಾದ್(ಜ.31): ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯ್ಯದ್ ಗೃಹ ಬಂಧನವನ್ನು ಖಂಡಿಸಿ ಈತನ ಬೆಂಬಲಿಗರು ಹಾಗೂ  ಪಾಕಿಸ್ತಾನಿ ಇಸ್ಲಾಮಿಕ್ ಚಾರಿಟಿಯ ಉದ್ಯೋಗಿಗಳು ಪಾಕ್ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.

 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್  ಹಲವು ವರ್ಷಗಳಿಂದ ಪಾಕ್'ನಲ್ಲೇ ನೆಲೆಸಿದ್ದು, ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಪಾಕ್ ಸರ್ಕಾರ ಈತನನ್ನು ಗೃಹ ಬಂಧನದಲ್ಲಿರಿಸಿತ್ತು. ಭಾರತ ಹಾಗೂ ಅಮೆರಿಕಾ ಎರಡೂ ದೇಶಗಳಿಗೂ ಬೇಕಾದ ಕುಖ್ಯಾತ ಅಪರಾಧಿಯಾಗಿದ್ದಾನೆ.  ಈತನನ್ನು ಹಿಡಿದುಕೊಟ್ಟವರಿಗಾಗಿ ಅಮೆರಿಕಾ ಸರ್ಕಾರ 1 ಕೋಟಿ ಡಾಲರ್ ಬಹುಮಾನ ಘೋಷಿಸಿದೆ.

ತನ್ನ ಕಾರ್ಯಾಚರಣೆಯನ್ನು ಮುಂದುವರಿಕೊಂಡು ಹೋಗಲಿದ್ದು, ಗೃಹ ಬಂಧನಕ್ಕೆ ಡೊನಾಲ್ಡ್ ಟ್ರಂಪ್ ಆಡಳಿತದ ಒತ್ತಡವೆ ಕಾರಣ ಎಂದು ಹಫೀಜ್ ಪಾಕ್ ಸರ್ಕಾರದ ಕ್ರಮವನ್ನು ಖಂಡಿಸಿದ್ದಾನೆ.

Follow Us:
Download App:
  • android
  • ios