ಅಮೃತಸರದಲ್ಲಿ ನಡೆಯಲಿರುವ ‘ಹಾರ್ಟ್ ಆಫ್ ಏಷ್ಯಾ’ ಸಮಾವೇಶದ ಸಂದರ್ಭ ಭಾರತದೊಂದಿಗೆ ಮಾತುಕತೆ ನಡೆಸಲು ಪಾಕ್ ಪ್ರಧಾನಿ ನವಾಜ್ ಷರೀಫ್ ಸರ್ಕಾರ ಸಿದ್ಧವಿದೆ- ಅಬ್ದುಲ್ ಬಸಿತ್

ನವದೆಹಲಿ(ನ.28): ಪಾಕಿಸ್ತಾನ ಭಾರತದೊಂದಿಗೆ ಷರತ್ತು ರಹಿತ ಮಾತುಕತೆಗೆ ಸಿದ್ಧವಿದೆ ಎಂದು ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ತಿಳಿಸಿರುವುದಾಗಿ ‘ಇಂಡಿಯಾ ಟುಡೇ’ ವರದಿ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂದಿನ ವಾರ ಅಮೃತಸರದಲ್ಲಿ ನಡೆಯಲಿರುವ ‘ಹಾರ್ಟ್ ಆಫ್ ಏಷ್ಯಾ’ ಸಮಾವೇಶದ ಸಂದರ್ಭ ಭಾರತದೊಂದಿಗೆ ಮಾತುಕತೆ ನಡೆಸಲು ಪಾಕ್ ಪ್ರಧಾನಿ ನವಾಜ್ ಷರೀಫ್ ಸರ್ಕಾರ ಸಿದ್ಧವಿದೆ ಎಂದು ಬಾಸಿತ್ ಹೇಳಿದ್ದಾರೆ.

ಪಾಕ್ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಅವರ ಕಾರ್ಯಕ್ರಮ ವೇಳಾಪಟ್ಟಿ ಅಂತಿಮಗೊಂಡಿಲ್ಲ. ಒಂದುವೇಳೆ ಆತಿಥೇಯ ರಾಷ್ಟ್ರ ಮಾತುಕತೆಯ ಪ್ರಸ್ತಾಪವನ್ನಿರಿಸಿದರೆ, ಅದನ್ನು ಪಾಕಿಸ್ತಾನ ಸ್ವೀಕರಿಸಲಿದೆ ಎಂದು ಬಾಸಿತ್ ತಿಳಿಸಿದ್ದಾರೆ.

‘‘ಮಾತುಕತೆಯನ್ನು ನಾವು ತಿಂಗಳ ಮಟ್ಟಿಗೆ ಮುಂದೂಡಬಹುದು, ವರ್ಷಗಳ ಕಾಲವೂ ಮುಂದೂಡಬಹುದು. ಆದರೆ ಅಂತಿಮವಾಗಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳಿಗೆ ಮಾತುಕತೆಯೊಂದೇ ಪರಿಹಾರ. ಎರಡೂ ರಾಷ್ಟ್ರಗಳು ಕುಳಿತುಕೊಂಡು ಎಲ್ಲ ಸಮಸ್ಯೆಗಳ ಕುರಿತಂತೆ ವಿಸ್ತೃತ ಚರ್ಚೆ ನಡೆಸಬೇಕಾಗಿದೆ" ಎಂದು ಅವರು ಹೇಳಿದ್ದಾರೆ.

ಡಿ. 3-4ರಂದು ‘ಹಾರ್ಟ್ ಆಫ್ ಏಷ್ಯಾ’ ಸಮ್ಮೇಳನ ನಡೆಯಲಿದೆ. ಡಿಸೆಂಬರ್ 4ರಂದು ಸರ್ತಾಜ್ ಅಜೀಜ್ ಭಾರತಕ್ಕೆ ಆಗಮಿಸಲಿದ್ದು, ಅಂದೇ ಪಾಕಿಸ್ತಾನಕ್ಕ ಮರಳಲಿದ್ದಾರೆ.