Asianet Suvarna News Asianet Suvarna News

ಕೇಳ್ರಪ್ಪೋ! ಒಂದಲ್ಲ, 10 ಸರ್ಜಿಕಲ್ ಸ್ಟ್ರೈಕ್ ಮಾಡತ್ತಂತೆ ಪಾಕ್!

ಭಾರತದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡ್ತಿವಿ! ಲಂಡನ್ ನಲ್ಲಿ ಕುಳಿತು ಭಾರತದ ವಿರುದ್ಧ ಗುಡುಗು! ಪಾಕ್ ಸೇನಾ ವಕ್ತಾರ ಜ.ಆಸಿಫ್ ಗಫೂರ್ ಅಚ್ಚರಿಯ ಹೇಳಿಕೆ! ಭಾರತದ ವಿರುದ್ಧ 10 ಸರ್ಜಿಕಲ್ ಸ್ಟ್ರೈಕ್ ಮಾಡತ್ತಂತೆ ಪಾಕ್ 
 

Pakistan Warns 10 Surgical Strikes Against India
Author
Bengaluru, First Published Oct 14, 2018, 12:28 PM IST
  • Facebook
  • Twitter
  • Whatsapp

ಇಸ್ಲಾಮಾಬಾದ್(ಅ.14): ಭಾರತ ನಮ್ಮ ಮೇಲೆ ಒಂದೇ ಒಂದು ಸರ್ಜಿಕಲ್ ದಾಳಿ ಮಾಡಿದರೂ ಅದಕ್ಕೆ ಪ್ರತಿಯಾಗಿ ಭಾರತದ ಮೇಲೆ 10 ಸರ್ಜಿಕಲ್ ದಾಳಿ ಮಾಡುತ್ತೇವೆಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ. 

ಲಂಡನ್ ನಲ್ಲಿ ಸೇನಾ ಮುಖ್ಯಸ್ಥ ಜ.ಕಮರ್ ಜಾವೇದ್ ಬಾಜ್ವಾ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನಾ ವಕ್ತಾರ ಜ.ಆಸಿಫ್ ಗಫೂರ್, ಭಾರತವೇನಾದರೂ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದೇ ಆದರೆ, ಭಾರತದ ಮೇಲೆ ಅದೇ ರೀತಿಯ 10 ದಾಳಿ ನಡೆಸುವ ಸಾಮರ್ಥ್ಯ ಪಾಕಿಸ್ತಾನಕ್ಕಿದೆ ಎಂದು ಹೇಳಿದ್ದಾರೆ. 

ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಸಂದೇಹ ಪಡಬೇಕಿಲ್ಲ. ದುಸ್ಸಾಹಸಕ್ಕೆ ಯತ್ನಿಸಿದರೆ, ಅದಕ್ಕೆ ದಿಟ್ಟ ಉತ್ತರ ನೀಡಲಾಗುತ್ತದೆ ಎಂದು ಗಫೂರ್ ತಿಳಿಸಿದ್ದಾರೆ. 

Follow Us:
Download App:
  • android
  • ios