Asianet Suvarna News Asianet Suvarna News

ಕಣಿವೆ ರಾಜ್ಯದಲ್ಲಿ ಉರುಳಿದ ಸರಕಾರ..ಪಾಕ್ ಲಾಭ ಮಾಡಿಕೊಳ್ಳುವುದೆ?

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಮುರಿದು ಬಿದ್ದಿದೆ. ಸರಕಾರ ರಚನೆಯಾಗಿ ಮೂರು ವರ್ಷಗಳ ನಂತರ ಬಿಜೆಪಿ ಬೆಂಬಲ ಹಿಂದಕ್ಕೆ ಪಡೆದಿದೆ. ಇದು ನಿನ್ನೆಯ ಮಟ್ಟಿಗೆ ದೊಡ್ಡ ಸುದ್ದಿ. ಆದರೆ ಬಿಜೆಪಿ-ಪಿಡಿಪಿ ಮೈತ್ರಿ ಕೊನೆಯಾಗಿದ್ದನ್ನು ಪಾಕಿಸ್ತಾನ ತನ್ನ ಲಾಭಕ್ಕೆ ಬಳಸಿಕೊಳ್ಳಲಿದೆಯೇ? ಎಂಬ ಪ್ರಶ್ನೆ ಸಹ ಎದುರಾಗಿದೆ.

Pakistan to milk PDP-BJP collapse In Jammu And Kashmir

ನವದೆಹಲಿ ಜೂನ್ 20:  ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಮುರಿದು ಬಿದ್ದಿದೆ. ಸರಕಾರ ರಚನೆಯಾಗಿ ಮೂರು ವರ್ಷಗಳ ನಂತರ ಬಿಜೆಪಿ ಬೆಂಬಲ ಹಿಂದಕ್ಕೆ ಪಡೆದಿದೆ. ಇದು ನಿನ್ನೆಯ ಮಟ್ಟಿಗೆ ದೊಡ್ಡ ಸುದ್ದಿ. ಆದರೆ ಬಿಜೆಪಿ-ಪಿಡಿಪಿ ಮೈತ್ರಿ ಕೊನೆಯಾಗಿದ್ದನ್ನು ಪಾಕಿಸ್ತಾನ ತನ್ನ ಲಾಭಕ್ಕೆ ಬಳಸಿಕೊಳ್ಳಲಿದೆಯೇ? ಎಂಬ ಪ್ರಶ್ನೆ ಸಹ ಎದುರಾಗಿದೆ.

ಈ ವಿಚಾರನ್ನು ವಿಶ್ಲೇಷಿಸಿದಾಗ ಹಲವಾರು ಅಂಶಗಳು ಗೋಚರವಾಗುತ್ತದೆ. ಜುಲೈ ಮೂರನೇ ವಾರ ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿದ್ದು ರಾಜಕಾರಣಿಗಳು ಅದರಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಸದ್ಯದ ಮಟ್ಟಿಗೆ ಈ ವಿಚಾರದ ಬಗ್ಗೆ ಚರ್ಚೆ ಮಾಡುವ ಗೋಜಿಗೆ ಹೋಗಿಲ್ಲ.

ಅವಕಾಶವಾದಿ ರಾಜಕಾರಣದಿಂದ ಕಾಶ್ಮೀರಕ್ಕೆ ಬೆಂಕಿ

ಚುನಾವಣೆ ಮುಗಿದ ನಂತರ ಪಾಕಿಸ್ತಾನದ ಮುಖಂಡರು ಪಾಕ್ ಆಕ್ರಮಿತ ಕಾಶ್ಮೀರದ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳಬಹುದು ಎಂದು ಪಾಕಿಸ್ತಾನದಲ್ಲಿ ಭಾರತದ ರಾಯಭಾರಿಯಾಗಿ ಕೆಲಸ ಮಾಡಿದ್ದ ಟಿಸಿಎ ರಾಘವನ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಮೂರು ವರ್ಷಗಳಿಂದ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಸರಕಾರ ಅಸ್ತಿತ್ವದಲ್ಲಿತ್ತು.  ಇನ್ನೊಂದು ಕಡೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಬಂದ  ಮೇಲೆ ಪಾಕ್  ನ ದಾಳಿ ಮತ್ತು ಉಗ್ರರ ಒಳನುಸುಳುವ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಮುಖವಾಗಿದ್ದು  ಇದೀಗ ಕಾಶ್ಮೀರ ಕಣಿವೆಯಲ್ಲಿ ಸರಕಾರವೇ ಬದಲಾಗಿದ್ದು ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios