ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನ ಸೇನೆ

First Published 17, Feb 2018, 8:16 AM IST
Pakistan to Deploy Troops in Saudi Arabia
Highlights

ಮಹತ್ವದ ನಿರ್ಧಾರವೊಂದರಲ್ಲಿ ಸೌದಿ ಅರೇಬಿಯಾದಲ್ಲಿ ತನ್ನ ಸೇನಾ ನೆಲೆಯೊಂದನ್ನು ತೆರೆಯಲು ಪಾಕಿಸ್ತಾನ ನಿರ್ಧರಿಸಿದೆ. ಉಭಯ ದೇಶಗಳ ಭದ್ರತಾ ಸಹಕಾರ ನೀತಿಯ ಅನ್ವಯ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಇಸ್ಲಮಾಬಾದ್: ಮಹತ್ವದ ನಿರ್ಧಾರವೊಂದರಲ್ಲಿ ಸೌದಿ ಅರೇಬಿಯಾದಲ್ಲಿ ತನ್ನ ಸೇನಾ ನೆಲೆಯೊಂದನ್ನು ತೆರೆಯಲು ಪಾಕಿಸ್ತಾನ ನಿರ್ಧರಿಸಿದೆ. ಉಭಯ ದೇಶಗಳ ಭದ್ರತಾ ಸಹಕಾರ ನೀತಿಯ ಅನ್ವಯ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಸೌದಿ ಅರೇಬಿಯಾ, ತನ್ನ ನೆರೆಯ ದೇಶ ಯೆಮನ್‌ನೊಂದಿಗೆ ಬಿಕ್ಕಟ್ಟು ಹೊಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ. ಪಾಕಿಸ್ತಾನ ಈವರೆಗೆ 1000 ಕ್ಕೂ ಹೆಚ್ಚು ಸೇನಾಪಡೆಗಳನ್ನು ಸೌದಿ ಅರೇಬಿಯಾಕ್ಕೆ ರವಾನಿಸಿದೆ.

loader