ವೀಸಾ ಅವಧಿ ವಿಸ್ತರಿಸುವ ವಿಚಾರದಲ್ಲಿ ಪ್ರಾದೇಶಿಕ ಪಾಸ್'ಪೋರ್ಟ್ ಕಚೇರಿಗಳಿಗಿದ್ದ ಅಧಿಕಾರವನ್ನು ಮೊಟುಕುಗೊಳಿಸಲಾಗಿದೆ. ಬದಲಾಗಿ, ಎಲ್ಲರೂ ಇಸ್ಲಾಮಾಬಾದ್'ನಲ್ಲಿರುವ ವಲಸೆ ಮುಖ್ಯ ಕಚೇರಿಗೆ ತೆರಳಿ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕಿದೆ. ಇವಷ್ಟೇ ಅಲ್ಲದೇ, ಇನ್ನೂ ಅನೇಕ ನಿಯಮಗಳನ್ನ ಬಿಗಿಗೊಳಿಸಲಾಗಿದೆ.
ನವದೆಹಲಿ(ಜೂನ್ 22): ಚೀನೀ ನಾಗರಿಕರಿಗೆ ವೀಸಾ ನೀಡುವ ನಿಯಮವನ್ನು ಪಾಕಿಸ್ತಾನ ಕಠಿಣಗೊಳಿಸಿದೆ. ಪಾಕಿಸ್ತಾನದ ವೀಸಾ ಪಡೆಯಲು ಈಗ ಚೀನೀಯರು ಹಲವು ನಿಯಮಗಳನ್ನು ಪಾಲಿಸಬೇಕಾಗಿದೆ. ಚೀನಾದ ಅಧಿಕಾರಿಗಳಿಂದ ಹಿಡಿದು ಪಾಕಿಸ್ತಾನದ ವಾಣಿಜ್ಯ ಮಂಡಳಿಯ ಶಿಫಾರಸು ಪತ್ರದವರೆಗೆ ಹಲವು ಹಂತಗಳನ್ನು ದಾಟಬೇಕಾಗುವಂತೆ ಪಾಕಿಸ್ತಾನ ನಿಯಮ ರೂಪಸಿಸಿದೆ. ಇತ್ತೀಚೆಗಷ್ಟೇ ಬಲೂಚಿಸ್ತಾನದಲ್ಲಿ ಇಬ್ಬರು ಚೀನೀ ನಾಗರಿಕರ ಹತ್ಯೆ ಘಟನೆ ಬಳಿಕ ಪಾಕಿಸ್ತಾನ ಇಂಥ ಬಿಗಿ ವೀಸಾ ನಿಯಮ ರೂಪಿಸಿರುವುದು ಗಮನಾರ್ಹ.
ಪಾಕಿಸ್ತಾನದ ಬ್ಯುಸಿನೆಸ್ ವೀಸಾ ಪಡೆಯಲು:
ಚೀನಾದಲ್ಲಿರುವ ಪಾಕಿಸ್ತಾನೀ ರಾಯಭಾರಿ ಕಚೇರಿಗಳಿಂದ ಪ್ರಮಾಣೀಕೃತವಾದ ಸಂಸ್ಥೆಯೊಂದರಿಂದ ಪಡೆದ ಆಹ್ವಾನವನ್ನು ತೋರಿಸಬೇಕು. ವಾಣಿಜ್ಯ ಮತ್ತು ಉದ್ಯಮ ಮಂಡಳಿಯಿಂದ ಈ ಆಹ್ವಾನವನ್ನು ದೃಢೀಕರಿಸಬೇಕು.
ದೀರ್ಘ ಕಾಲದ ವೀಸಾ ವಿಸ್ತರಣೆಗೆ:
ವೀಸಾ ಅವಧಿ ವಿಸ್ತರಿಸುವ ವಿಚಾರದಲ್ಲಿ ಪ್ರಾದೇಶಿಕ ಪಾಸ್'ಪೋರ್ಟ್ ಕಚೇರಿಗಳಿಗಿದ್ದ ಅಧಿಕಾರವನ್ನು ಮೊಟುಕುಗೊಳಿಸಲಾಗಿದೆ. ಬದಲಾಗಿ, ಎಲ್ಲರೂ ಇಸ್ಲಾಮಾಬಾದ್'ನಲ್ಲಿರುವ ವಲಸೆ ಮುಖ್ಯ ಕಚೇರಿಗೆ ತೆರಳಿ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕಿದೆ. ಇವಷ್ಟೇ ಅಲ್ಲದೇ, ಇನ್ನೂ ಅನೇಕ ನಿಯಮಗಳನ್ನ ಬಿಗಿಗೊಳಿಸಲಾಗಿದೆ.
ಚೀನೀ ನಾಗರಿಕರ ಹತ್ಯೆಗೆ ಕಾರಣ?
ಬಲೂಚಿಸ್ತಾನದಲ್ಲಿ ಇಬ್ಬರು ಚೀನೀ ನಾಗರಿಕರ ಹತ್ಯೆಗೈದ ಘಟನೆಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿತ್ತು. ಅದು ಹೇಳಿಕೊಂಡ ಪ್ರಕಾರ, ಆ ಇಬ್ಬರು ಚೀನೀಯರು ಬ್ಯುಸಿನೆಸ್ ಮಾಡುವ ನೆಪದಲ್ಲಿ ವೀಸಾ ಪಡೆದುಕೊಂಡು ಇಲ್ಲಿ ಕ್ರೈಸ್ತ ಧರ್ಮ ಪ್ರಸಾರ ಕಾರ್ಯದಲ್ಲಿ ತೊಡಗಿದ್ದರಂತೆ.
ಪಾಕಿಸ್ತಾನದಲ್ಲಿ ಚೀನಾ ಸಾಕಷ್ಟು ಬಂಡವಾಳ ಹೂಡಿ ಸಿಪೆಕ್ ಕಾರಿಡಾರ್ ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸಾವಿರಾರು ಚೀನೀ ನಾಗರಿಕರು ಈ ಯೋಜನೆಗಾಗಿ ಪಾಕಿಸ್ತಾನದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ವರ್ಕ್ ವೀಸಾ ಮೊದಲಾದವನ್ನು ಚೀನೀಯರು ದುರುಪಯೋಗಿಸಿಕೊಳ್ಳಬಹುದು ಎಂಬ ಶಂಕೆಯಿಂದ ಪಾಕಿಸ್ತಾನವು ವೀಸಾ ನಿಯಮವನ್ನು ಬಿಗಿಗೊಳಿಸಿದೆ.