Asianet Suvarna News Asianet Suvarna News

ಹತಾಶ ಪಾಕ್‌ನಿಂದ ಬಸ್‌ ಸೇವೆಗೂ ಕೊಕ್‌!

ಹತಾಶ ಪಾಕ್‌ನಿಂದ ಬಸ್‌ ಸೇವೆಗೂ ಕೊಕ್‌| ಸಂಝೋತಾ ಎಕ್ಸ್‌​ಪ್ರೆಸ್‌ ರದ್ದು ಬಳಿಕ ಹೊಸ ಘೋಷ​ಣೆ| ದೆಹ​ಲಿ-ಲಾಹೋರ್‌ ನಡುವಿನ ಬಸ್‌ ಸಂಚಾರ ಸ್ಥಗಿತ

Pakistan suspends Delhi Lahore Dosti bus service
Author
Bangalore, First Published Aug 11, 2019, 10:08 AM IST

ಇಸ್ಲ​ಮಾ​ಬಾ​ದ್‌[ಆ.11]: ಕಾಶ್ಮೀ​ರ​ಕ್ಕಿದ್ದ ವಿಶೇಷ ಸ್ಥಾನ​ಮಾನ ತೆಗೆ​ದುಹಾಕಿದ ಬಳಿಕ ಹತಾಶೆಯಿಂದ ಚಡ​ಪ​ಡಿ​ಸು​ತ್ತಿ​ರುವ ಪಾಕಿ​ಸ್ತಾನ, ದೆಹಲಿ ಹಾಗೂ ಲಾಹೋರ್‌ ನಡುವೆ ಸಂಚಾರಕ್ಕೆ ಇರುವ ಸೌಹಾರ್ಧ ಬಸ್‌ ಸೇವೆಯನ್ನೂ ಸ್ಥಗಿ​ತ​ಗೊಳಿಸಿದೆ. ಸೋಮ​ವಾ​ರ​ದದಿಂದ ದೆಹಲಿ ಹಾಗೂ ಲಾಹೋರ್‌ ನಡು​ವಣ ಬಸ್‌ ಸೇವೆ ರದ್ದಾ​ಗ​ಲಿದೆ ಎಂದು ಪಾಕ್‌ ದೂರ​ಸಂಪರ್ಕ ಖಾತೆ ಸಚಿವ ಮುರಾದ್‌ ಸಯೀದ್‌ ಈ ಘೋಷಣೆ ಮಾಡಿದ್ದಾರೆ.

ಎರಡು ಪ್ರಯಾ​ಣಿ​ಕ​ರಿದ್ದ ಪಾಕಿ​ಸ್ತಾ​ನ ಪ್ರವಾಸೋದ್ಯಮ ಅಭಿ​ವೃದ್ಧಿ ನಿಗ​ಮದ ಬಸ್‌ ಬೆಳಗ್ಗೆ 6 ಗಂಟೆಗೆ ದೆಹ​ಲಿಯ ಅಂಬೇ​ಡ್ಕರ್‌ ಸ್ಟೇಡಿಯಂ ಬಸ್‌ ನಿಲ್ದಾ​ಣ​ದಿಂದ ಹೊರ​ಟಿದ್ದು, ಮೂರು ಪ್ರಯಾ​ಣಿ​ಕ​ರನ್ನು ಹೊತ್ತು ದೆಹ​ಲಿ ಸಾರಿಗೆ ನಿಗ​ಮದ ಬಸ್‌ ಅದೇ ವೇಳೆಗೆ ಲಾಹೋರ್‌ ನಿಂದ ದೆಹ​ಲಿಗೆ ಹೊರ​ಟಿ​ದೆ. 1999 ರಲ್ಲಿ ಆಟಲ್‌ ಬಿಹಾರಿ ವಾಜ​ಪೇಯಿ ಹಾಗೂ ನವಾಜ್‌ ಶರೀಫ್‌ ಶಾಂತಿ ಒಪ್ಪಂದದ ಫಲವಾಗಿ ದೆಹಲಿ -ಲಾಹೋರ್‌ ಮಧ್ಯೆ ಬಸ್‌ ಸಂಚಾ​ರ​ ಆರಂಭ​ವಾ​ಗಿತ್ತು.

2001 ರ ಸಂಸತ್‌ ದಾಳಿ ಬಳಿಕ ಸ್ಥಗಿ​ತ​ವಾ​ಗಿದ್ದ ಈ ಸೇವೆಯನ್ನು ಮತ್ತೆ 2003 ಜುಲೈ​ನಲ್ಲಿ ಪುನ​ರಾ​ರಂಭಿ​ಸ​ಲಾ​ಗಿ​ತ್ತು. ಪುಲ್ವಾಮ ದಾಳಿ ಸಂದ​ರ್ಭ ಎರಡೂ ರಾಷ್ಟ್ರ​ಗ​ಳ ನಡು​ವಿನ ಸಂಬಂಧ ವಿಷ​ಮ​ವಾ​ಗಿ​ದ್ದರೂ ಬಸ್‌ ಸೇವೆಗೆ ಯಾವುದೇ ತೊಂದರೆ ಉಂಟಾ​ಗಿ​ರ​ಲಿ​ಲ್ಲ. ವಾರದ ಏಳೂ ದಿನವೂ ಈ ಬಸ್‌ ದೆಹಲಿ ಹಾಗೂ ಲಾಹೋರ್‌ ಮಧ್ಯೆ ಚಲಿ​ಸು​ತ್ತಿತ್ತು.

ಈ ಮಧ್ಯೆ ರಾಜ​ಸ್ಥಾನ ಗಡಿ ಮೂಲಕ ಜೋಧ್‌​ಪು​ರ​ದಿಂದ- ಕರಾ​ಚಿಗೆ ತೆರ​ಳುವ ಥಾರ್‌ ಎಕ್ಸ್‌​ಪ್ರೆಸ್‌ ರೈಲು ಸೇವೆಯನ್ನೂ ಸ್ಥಗಿ​ತ​ಗೊ​ಳಿಸ​ಲಾ​ಗಿದ್ದು, ಶ್ರುಕ್ರ​ವಾರ ರಾತ್ರಿ ಕರಾ​ಚಿ​ಯಿಂದ ಕೊನೆಯ ರೈಲು ಹೋಗಿದೆ ಎಂದು ಪಾಕ್‌ ಸಚಿ​ವ ತಿಳಿ​ಸಿ​ದ್ದಾ​ರೆ.

133 ಕಿ.ಮಿ ಉದ್ದದ ಈ ಹಳಿ​ಯನ್ನು 13 ಬಿಲಿ​ಯ​ನ್‌ ರು. ಖರ್ಚಿ​ನಲ್ಲಿ ನಿರ್ಮಾಣ ಮಾಡ​ಲಾ​ಗಿದ್ದು, ಇನ್ನು ಮುಂದೆ ಅದನ್ನು ಥಾರ್‌ ಕಲ್ಲಿ​ದ್ದಲು ಯೋಜ​ನೆಗೆ ಬಳ​ಸ​ಲಾ​ಗ್ತು​ತದೆ ಎಂದು ರಶೀದ್‌ ಹೇಳಿ​ದ್ದಾರೆ. ಜೋಧ್‌​ಪು​ರದ ಭಗತ್‌ ಕೀ ಕೋಥಿ ರೈಲು ನಿಲ್ದಾ​ಣ​ದಿಂದ ಕರಾಚಿಗೆ ಪ್ರತೀ ಶುಕ್ರ​ವಾರ ಚಲಿ​ಸುವ ರೈಲು 41 ವರ್ಷ​ಗಳ ರದ್ದಿನ ಬಳಿಕ 2006 ಫೆ. 18 ರಂದು ಪುನ​ರಾ​ರಂಭ​ಗೊಂಡಿತ್ತು. ಇದೇ ಬುಧ​ವಾ​ರ​ದಂದು ದೆಹಲಿ-ಲಾಹೋರ್‌ ಮಧ್ಯೆ ಅಟ್ಟಾ​ರಿ-ವಾಘಾ ಗಡಿ ಮೂಲ​ಕ ಓಡುವ ಸಂಝೋತಾ ಎಕ್ಸ್‌​ಪ್ರೆಸ್‌ ರೈಲನ್ನು ಸ್ಥಗಿ​ತ​ಗೊಳಿಸಿ ಪಾಕಿ​ಸ್ತಾನ ಅದೇಶ ಹೊರ​ಡಿ​ಸಿತ್ತು. ಮಾತ್ರ​ವ​ಲ್ಲ ಭಾರ​ತ​ದೊಂದಿಗಿನ ದ್ವಿಪ​ಕ್ಷೀಯ ಒಪ್ಪಂದ​ಗ​ಳನ್ನೂ ಮುರಿ​ದು​ಕೊಂಡಿದ್ದ ಪಾಕ್‌ ಬಸ್ಸು ಸಂಚಾರ ರದ್ದು ಮಾಡುವ ಮೂಲಕ ತನ್ನ ಸೇಡಿನ ನಿಲುವು ಮುಂದು​ವ​ರಿ​ಸಿ​ದೆ.

Follow Us:
Download App:
  • android
  • ios