ಅಂತರ್ಜಲ ಬಳಸಿದ ಮಿನರಲ್‌ ವಾಟರ್‌ಗೆ ಲೀ.ಗೆ 1ರು. ತೆರಿಗೆ |  ಅಂತರ್ಜಲ ಬಳಸಿದ ಮಿನರಲ್‌ ವಾಟರ್‌ಗೆ ಲೀ.ಗೆ 1ರು. ತೆರಿಗೆ ಕಟ್ಟಬೇಕೆಂದು ಪಾಕ್ ಸುಪ್ರೀಂಕೋರ್ಟ್ ಆದೇಶ  

ಇಸ್ಲಾಮಾಬಾದ್‌ (ಜ.13): ಮಿನರಲ್‌ ವಾಟರ್‌ ಹಾಗೂ ತಂಪು ಪಾನೀಯ ಮಾರಾಟ ಕಂಪನಿಗಳು ಭೂಮಿಯಿಂದ ತೆಗೆಯುವ ಪ್ರತಿ ಲೀಟರ್‌ ನೀರಿನ ಮೇಲೆ 1 ರು. ತೆರಿಗೆ ಕಟ್ಟಬೇಕು ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್‌ ಶನಿವಾರ ಆದೇಶ ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೀರು ಮಾರಾಟ ಕಂಪನಿಗಳು ಉಚಿತವಾಗಿ ಭೂಮಿಯಿಂದ ನೀರು ತೆಗೆದು ಮಾರಾಟ ಮಾಡುತ್ತಿರುವ ಸಂಬಂಧ ಕೋರ್ಟ್‌ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿತು.

ನೀರಿನಿಂದ ಬಂದ ಆದಾಯವನ್ನು ಡಯಾಮೀರ್‌- ಭಾಷಾ ಮತ್ತು ಮೊಹಮ್ಮದ್‌ ಡ್ಯಾಮ್‌ಗಳ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು. ಇದಕ್ಕಾಗಿ ರಾಜಧಾನಿ ಹಾಗೂ ಜಿಲ್ಲಾಡಳಿತಗಳಲ್ಲಿ ಪ್ರತ್ಯೇಕ ಖಾತೆಗಳನ್ನು ತೆರೆಯಬೇಕು ಎಂದು ಕೋರ್ಟ್‌ ಹೇಳಿದೆ.