ಭಾರತದಿಂದ ಬರುವ ಕೃಷಿ ಉತ್ಪನ್ನಗಳು ವಾಘಾ ಗಡಿ ದಾಟಿ ನಂತರ ಕರಾಚಿ ಬಂದರಿಗೆ ಬರಬೇಕು. ಜೊತೆಗೆ ಅಲ್ಲಿಂದ ಅನುಮತಿ ಪಡೆದು ಮುಂದಿನ ಸ್ಥಳಗಳಿಗೆ ಕಳುಹಿಸಬೇಕಾಗುತ್ತದೆ ಎಂದು ಡಾನ್ ವರದಿ ಮಾಡಿದೆ.

ಇಸ್ಲಾಮಾಬಾದ್​ (ನ.27): ಗಡಿಯಲ್ಲಿ ಎರಡು ದೇಶಗಳ ನಡುವೆ ಉದ್ವಿಗ್ನ ವಾತಾವರಣ ಮುಂದುವರಿದಿರುವ ಕಾರಣ, ಭಾರತದ ಹತ್ತಿ ಸೇರಿದಂತೆ ಕೃಷಿ ಉತ್ಪನ್ನಗಳ ಆಮದನ್ನು ಪಾಕಿಸ್ತಾನ ನಿಲ್ಲಿಸಿದೆ.

ಭಾರತದಿಂದ ಬರುವ ಕೃಷಿ ಉತ್ಪನ್ನಗಳು ವಾಘಾ ಗಡಿ ದಾಟಿ ನಂತರ ಕರಾಚಿ ಬಂದರಿಗೆ ಬರಬೇಕು. ಜೊತೆಗೆ ಅಲ್ಲಿಂದ ಅನುಮತಿ ಪಡೆದು ಮುಂದಿನ ಸ್ಥಳಗಳಿಗೆ ಕಳುಹಿಸಬೇಕಾಗುತ್ತದೆ ಎಂದು ಡಾನ್ ವರದಿ ಮಾಡಿದೆ.

ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಲಿಖಿತ ಆದೇಶವಿಲ್ಲದೇ ಭಾರತದಿಂದ ಕೃಷಿ ಪದಾರ್ಥಗಳ ಆಮದು ಸಾಧ್ಯವಿಲ್ಲ, ಹೀಗಾಗಿ ಭಾರತದ ಕೃಷಿ ಉತ್ಪನ್ನಗಳ ಆಮದನ್ನು ನಿಲ್ಲಿಸಲಾಗಿದೆ ಎಂದು ಸಸ್ಯ ಸಂರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.