ಚವಾಣ್ ಬಿಡುಗಡೆ ಸುದ್ದಿಯನ್ನ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಶ್ ಭಮ್ರೆ ಖಚಿತಪಡಿಸಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ವಾಘಾ ಗಡಿಯಲ್ಲಿ ಭಾರತೀಯ ಸೇನೆಗೆ ಯೋಧ ಚವಾಣ್`ರನ್ನ ಹಸ್ತಾಂತರಿಸಲಾಗಿದೆ.

ನವದೆಹಲಿ(ಜ.21): ಸೌಹಾರ್ದತೆಯ ಪ್ರತೀಕವಾಗಿ ಪಾಕಿಸ್ತಾನ ಸರ್ಕಾರ ಭಾರತೀಯ ಯೋಧ ಚಂದು ಚವಾಣ್`ನನ್ನ ಬಿಡುಗಡೆಗೊಳಿಸಿದೆ. ಕಾಶ್ಮೀರದ ರಾಷ್ಟ್ರೀಯ ರೈಫ್ಲ್ ಯೋಧ ಚವಾಣ್, ಕಳೆದ ವರ್ಷ ಆಕಸ್ಮಿಕವಾಗಿ ಗಡಿ ರೇಖೆ ದಾಟಿದ್ದಾಗ ಪಾಕಿಸ್ತಾನದ ಸೈನಿಕರು ಬಂಧಿಸಿದ್ದರು.