Asianet Suvarna News Asianet Suvarna News

ನಮ್ಮ ದೇಶದಲ್ಲಿ ಭಯೋತ್ಪಾದಕ ಸಂಘಟನೆಗಳೇ ಇಲ್ಲ; ಬ್ರಿಕ್ಸ್ ಶೃಂಗಸಭೆ ನಿರ್ಣಯವನ್ನು ನಿರಾಕರಿಸಿದ ಪಾಕ್

ಪಾಕಿಸ್ತಾನ ಮೂಲದ ಲಷ್ಕರೆ ತೊಯ್ಬಾ ಹಾಗೂ ಜೈಶ್ ಎ ಮಹಮ್ಮದ್ ಭಯೋತ್ಪಾದಕ ಗುಂಪುಗಳು  ಪ್ರಾದೇಶಿಕ ಭದ್ರತೆಗೆ ಕಂಟಕವಾಗಿದೆ ಎಂದು ಬ್ರಿಕ್ಸ್ ಸಮಾವೇಶದ ನಿರ್ಣಯವನ್ನು ಪಾಕ್ ನಿರಾಕರಿಸಿದೆ. ನಮ್ಮ ದೇಶದಲ್ಲಿ ಅಂತಹ ಭಯೋತ್ಪಾದಕ ಸಂಘಟನೆಗಳೇ ಇಲ್ಲ. ನಾವದಕ್ಕೆ ಪೋಷಣೆ ಮಾಡುತ್ತಿಲ್ಲ ಎಂದು ಪಾಕಿಸ್ತಾನ ಹೇಳಿದೆ.

Pakistan rejects Brics statement on presence of terror groups on its soil
  • Facebook
  • Twitter
  • Whatsapp

ಇಸ್ಮಮಾಬಾದ್ (ಸೆ.05): ಪಾಕಿಸ್ತಾನ ಮೂಲದ ಲಷ್ಕರೆ ತೊಯ್ಬಾ ಹಾಗೂ ಜೈಶ್ ಎ ಮಹಮ್ಮದ್ ಭಯೋತ್ಪಾದಕ ಗುಂಪುಗಳು  ಪ್ರಾದೇಶಿಕ ಭದ್ರತೆಗೆ ಕಂಟಕವಾಗಿದೆ ಎಂದು ಬ್ರಿಕ್ಸ್ ಸಮಾವೇಶದ ನಿರ್ಣಯವನ್ನು ಪಾಕ್ ನಿರಾಕರಿಸಿದೆ. ನಮ್ಮ ದೇಶದಲ್ಲಿ ಅಂತಹ ಭಯೋತ್ಪಾದಕ ಸಂಘಟನೆಗಳೇ ಇಲ್ಲ. ನಾವದಕ್ಕೆ ಪೋಷಣೆ ಮಾಡುತ್ತಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ಪಾಕಿಸ್ತಾನದಲ್ಲಿ ಯಾವುದೇ ಭಯೋತ್ಪಾದಕ ಸಂಘಟನೆಗಳಿಲ್ಲ. ಈ ಹಿಂದೆ ಇದ್ದ ಸಂಘಟನೆಗಳ ಅವಶೇಷಗಳನ್ನು ನಶಿಸಿ ಹಾಕಲಾಗಿದೆ.  ಭಯೋತ್ಪಾದಕರಿಗೆ ಅಫ್ಘಾನಿಸ್ತಾನ ಸ್ವರ್ಗವಾಗಿದೆ. ಪಾಕಿಸ್ತಾನ ಬಾಹ್ಯ ಆಕ್ರಮಣಗಳಿಗೆ ಹೆದರುವುದಿಲ್ಲ. ನಮ್ಮ ಸೇನೆ ಸದಾ ಬಾಹ್ಯ ಶತ್ರುಗಳ ಮೇಲೆ ಕಣ್ಣಿಟ್ಟಿರುತ್ತದೆ ಎಂದು ಪಾಕ್ ರಕ್ಷಣಾ ಸಚಿವ ಖರ್ರಮ್ ದಸ್ತಗಿರ್ ಖಾನ್ ಹೇಳಿದ್ದಾರೆ.   

Follow Us:
Download App:
  • android
  • ios