Asianet Suvarna News Asianet Suvarna News

ಪಾಕಿಸ್ತಾನದಲ್ಲಿ ಟಿಪ್ಪು ಪುಣ್ಯತಿಥಿ

‘ಮೈಸೂರು ಹುಲಿ’ ಖ್ಯಾತಿಯ ಟಿಪ್ಪು ಸುಲ್ತಾನ್ ಅವರ 218 ನೇ ಪುಣ್ಯತಿಥಿಯನ್ನು ಪಾಕಿಸ್ತಾನದಲ್ಲಿ ಶುಕ್ರವಾರ ಆಚರಿಸಲಾಯಿತು. ಅಲ್ಲದೇ  ಈ ವೇಳೆ ಟಿಪ್ಪುವನ್ನು ವಿವಿಧ ರೀತಿಯಾಗಿ ಹೊಗಳಿದೆ

Pakistan praises Tipu Sultan

ಇಸ್ಲಾಮಾಬಾದ್: ‘ಮೈಸೂರು ಹುಲಿ’ ಖ್ಯಾತಿಯ ಟಿಪ್ಪು ಸುಲ್ತಾನ್ ಅವರ 218 ನೇ ಪುಣ್ಯತಿಥಿಯನ್ನು ಪಾಕಿಸ್ತಾನದಲ್ಲಿ ಶುಕ್ರವಾರ ಆಚರಿಸಲಾಯಿತು. ಈ ಬಗ್ಗೆ ಚಿತ್ರ ಸಮೇತ ಟ್ವೀಟ್ ಮಾಡಿರುವ ಪಾಕಿಸ್ತಾನ ಸರ್ಕಾರ, ‘ಮೈಸೂರು ಹುಲಿ ಟಿಪ್ಪು ಸುಲ್ತಾನರನ್ನು ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಸ್ಮರಿಸುತ್ತಿದ್ದೇವೆ.  ತಮ್ಮ ಚಿಕ್ಕ ವಯಸ್ಸಿನಲ್ಲೇ ಟಿಪ್ಪು ಅವರು ಯುದ್ಧಕಲೆಯಲ್ಲಿ ತರಬೇತಿ ಪಡೆದರು ಹಾಗೂ ಕಲಿಯುವ ತುಡಿತ ಹೊಂದಿದ್ದರು’ ಎಂದು ಬಣ್ಣಿಸಿದೆ.

‘ಟಿಪ್ಪು ಸುಲ್ತಾನ್ ಅವರು ಹೈದರ್ ಅಲಿ ಅವರ  ಜ್ಯೇಷ್ಠ ಪುತ್ರ. ಮೈಸೂರು ಸಾಮ್ರಾಜ್ಯವು ಉತ್ತುಂಗಕ್ಕೇ ರಿದ್ದು ಟಿಪ್ಪು ಸುಲ್ತಾನ್ ಅವಧಿಯಲ್ಲಿ’ ಎಂದು ಪಾಕ್ ಸರ್ಕಾರ ಟ್ವೀಟ್‌ನಲ್ಲಿ  ಪ್ರಶಂಸಿಸಿದೆ. ಇನ್ನು ಟಿಪ್ಪುವಿನ ಕೊಡುಗೆಗಳನ್ನು ಪಟ್ಟಿ ಮಾಡಿರುವ ಪಾಕ್ ಸರ್ಕಾರ, ‘ಟಿಪ್ಪು ಅವಧಿಯಲ್ಲಿ ಹೊಸ ನಾಣ್ಯಟಂಕಿಸಲಾಯಿತು. ಮೌಲುದಿ ಚಾಂದ್ರಮಾನ ಪಂಚಾಂಗ ಅಳವಡಿಸಲಾ ಯಿತು. ಭೂಕಂದಾಯ ವ್ಯವಸ್ಥೆ ಜಾರಿಗೆ ತಂದರು ಹಾಗೂ ರೇಷ್ಮೆ ಕೃಷಿ ಪ್ರೋತ್ಸಾಹಿಸಿದರು’ ಎಂದು ಹೊಗಳಿದೆ. 

ರೇಡಿಯೋ ಸ್ಮರಣೆ: ‘ಮೈ ಸೂರಿನ ಮುಸ್ಲಿಂ ಅರಸ ಬಾದ್‌ಶಾ ನಸೀಬುದುಲ್ಲಾ ಸುಲ್ತಾನ್ ಫತೇ ಅಲಿ ಬಹಾ ದೂರ್ ಸಾಹಬ್ ಟಿಪ್ಪು ಅಲಿಯಾಸ್ ಟಿಪ್ಪು ಸುಲ್ತಾನರ ಪುಣ್ಯತಿಥಿಯನ್ನು ಶುಕ್ರವಾರ ಆಚರಿ ಸಲಾಯಿತು’ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ. ಇದೇ ವೇಳೆ ಟಿಪ್ಪುವನ್ನು ಪ್ರಶಂಸಿ ಸಿರುವ ಅದು, ‘ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅವರು ಹೋರಾಡಿತು. ಅವರೊಬ್ಬ  ಉತ್ತಮ ಆಡಳಿತಗಾರ, ಯೋಧ’ ಎಂದು ಬಣ್ಣಿಸಿದೆ.  

Follow Us:
Download App:
  • android
  • ios