ಪ್ರಧಾನಿ ನವಾಜ್ ಷರೀಫ್ ಈ ನೇಮಕಾತಿ ಮಾಡಿದ್ದಾರೆ. ನಿವೃತ್ತರಾಗುತ್ತಿರುವ ಸೇನಾ ಮುಖ್ಯಸ್ಥ ರಹೀಲ್ ಸ್ಥಾನಕ್ಕೆ ಜನರಲ್ ಬಜ್ವಾ ನೇಮಕಗೊಂಡಿದ್ದಾರೆ ಎಂದು ಪ್ರಧಾನಿ ವಕ್ತಾರ ತಿಳಿಸಿದ್ದಾರೆ.

ಇಸ್ಲಾಮಾಬಾದ್(ನ.26): ಪಾಕಿಸ್ತಾನದ ಹೊಸ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಖಮರ್ ಜಾವೇದ್ ಬಜ್ವಾರನ್ನು ನೇಮಕ ಮಾಡಲಾಗಿದೆ.

ಪ್ರಧಾನಿ ನವಾಜ್ ಷರೀಫ್ ಈ ನೇಮಕಾತಿ ಮಾಡಿದ್ದಾರೆ. ನಿವೃತ್ತರಾಗುತ್ತಿರುವ ಸೇನಾ ಮುಖ್ಯಸ್ಥ ರಹೀಲ್ ಸ್ಥಾನಕ್ಕೆ ಜನರಲ್ ಬಜ್ವಾ ನೇಮಕಗೊಂಡಿದ್ದಾರೆ ಎಂದು ಪ್ರಧಾನಿ ವಕ್ತಾರ ತಿಳಿಸಿದ್ದಾರೆ.

ಜ. ರಹೀಲ್ ಮಂಗಳವಾರ ನಿವೃತ್ತರಾಗಲಿದ್ದು, ಅದೇ ದಿನ ನೂತನ ಸೇನಾ ಮುಖ್ಯಸ್ಥ ಜ. ಬಜ್ವಾ ಅಧಿಕಾರ ಸ್ವೀಕರಿಸಲಿದ್ದಾರೆ. ನಾಗರಿಕ ಮತ್ತು ಸೇನಾ ಆಡಳಿತದ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬಜ್ವಾ ನೇಮಕಾತಿ ಮಹತ್ವ ಪಡೆದಿದೆ ಎಂದು ವಿಶ್ಲೇಷಿಸಲಾಗಿದೆ.

ಓರ್ವ ಸೈನಿಕನ ಪ್ರಾಣಕ್ಕೆ ಮೂರು ಬಲಿ:

ಭಾರತದ ಸೇನೆ ಹತ್ಯೆ ನಡೆಸುವ ಓರ್ವ ಪಾಕಿಸ್ತಾನಿ ಸೈನಿಕನ ಪ್ರಾಣಕ್ಕೆ ಬದಲಾಗಿ, ತಮ್ಮ ಸೈನ್ಯ ಮೂವರು ಭಾರತೀಯ ಸೈನಿಕರನ್ನು ಬಲಿ ತೆಗೆದುಕೊಳ್ಳಲಿದೆ ಎಂದು ಪಾಕ್ ರಕ್ಷಣಾ ಸಚಿವ ಖವಾಜ ಆಸೀಫ್ ಹೇಳಿದ್ದಾರೆ.

ಪಾಕಿಸ್ತಾನ ವಿರುದ್ಧ ಯುದ್ಧ ಸಾರಿದರೆ, ಭಾರತ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಸೀಫ್ ಹೇಳಿದ್ದಾರೆ. ಅವರು ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿನ ಭಯೋತ್ಪಾದನೆಯಲ್ಲಿ ಭಾರತದ ಭಾಗಿತ್ವವನ್ನು ತೋರಿಸುವ ಕಡತಗಳು ಮತ್ತು ವೀಡಿಯೊ ಚಿತ್ರಗಳನ್ನು ನಾವು ವಿಶ್ವಸಂಸ್ಥೆ ಮತ್ತು ಇತರ ರಾಷ್ಟ್ರಗಳಿಗೆ ಕಳುಹಿಸಿದ್ದೇವೆ ಎಂದು ಅವರು ಹೇಳಿದ್ದಾರೆ.