ರೈಸಿನಾ ಸಂವಾದದಲ್ಲಿ ಮಾತನಾಡುತ್ತಾ, ನಾನು ಲಾಹೋರ್’ಗೆ ಪ್ರಯಾಣಿಸಿದೆ; ಆದರೆ ಕೇವಲ ಭಾರತವೊಂದೇ ಶಾಂತಿಯ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ. ಮಾತುಕತೆ ನಡೆಯಬೇಕಾದರೆ ಪಾಕಿಸ್ತಾನವು ಭಯೋತ್ಪಾದನೆ ಮಾರ್ಗವನ್ನು ಬಿಟ್ಟುಬಿಡಬೇಕು, ಎಂದು ಪಾಕಿಸ್ತಾನಕ್ಕೆ ಕರೆ ಕೊಟ್ಟಿದ್ದಾರೆ.
ನವದೆಹಲಿ (ಜ.17): ಭಯೋತ್ಪಾದನೆ ದಾರಿಯನ್ನು ಬಿಟ್ಟು ಶಾಂತಿಯ ಮಾರ್ಗದಲ್ಲಿ ನಡೆಯುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನವನ್ನು ಆಗ್ರಹಿಸಿದ್ದಾರೆ.
ರೈಸಿನಾ ಸಂವಾದದಲ್ಲಿ ಮಾತನಾಡುತ್ತಾ, ನಾನು ಲಾಹೋರ್’ಗೆ ಪ್ರಯಾಣಿಸಿದೆ; ಆದರೆ ಕೇವಲ ಭಾರತವೊಂದೇ ಶಾಂತಿಯ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ. ಮಾತುಕತೆ ನಡೆಯಬೇಕಾದರೆ ಪಾಕಿಸ್ತಾನವು ಭಯೋತ್ಪಾದನೆಯಿಂದ ದೂರವಿರಬೇಕು, ಎಂದು ಪಾಕಿಸ್ತಾನಕ್ಕೆ ಕರೆ ಕೊಟ್ಟಿದ್ದಾರೆ.
ನೆರೆಕರೆಯ ಬಗ್ಗೆ ನಾನು ಹೊಂದಿರುವ ದೂರದೃಷ್ಟಿಯು, ನನ್ನ ಪ್ರಮಾಣವಚನ ಸಮಾರಂಭಕ್ಕೆ ಸಾರ್ಕ್ ದೇಶಗಳನ್ನು ಆಹ್ವಾನಿಸುವಂತೆ ಮಾಡಿದೆ, ಎಂದು ಮೋದಿ ಹೇಳಿದ್ದಾರೆ.
ಭಾರತದಲ್ಲಿರುವ ಹಾಗೂ ಹೊರದೇಶಗಳಲ್ಲಿರುವ ಎಲ್ಲಾ ಭಾರತೀಯರ ಶ್ರೇಯೋಭಿವೃದ್ಧಿ ತಮ್ಮ ಸರ್ಕಾರಕ್ಕೆ ಬಹಳ ಮಹತ್ವದ ವಿಷಯವಾಗಿದೆ ಎಂದು ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ 2ನೇ ರೈಸಿನಾ ಸಂವಾದದಲ್ಲಿ, 65 ದೇಶಗಳಿಂದ 250ಕ್ಕಿಂತಲೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
