ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ವಾಣಿಜ್ಯ ಸಲಹೆಗಾರ ರಾಜೇಶ್ ಅಗ್ನಿಹೋತ್ರಿ ಹಾಗೂ ಮಾಧ್ಯಮ ಸಲಹೆಗಾರ ಬಲಬೀರ್ ಸಿಂಗ್ ಅವರನ್ನು ಮಾತೃ ದೇಶಕ್ಕೆ ತೆರಳಲು ಸೂಚಿಸಿದೆ.

ಇಸ್ಲಾಮಾಬಾದ್(ನ.2): ಸೇಡಿನ ಕ್ರಮ ಅನುಸರಿಸುತ್ತಿರುವ ಪಾಕಿಸ್ತಾನವು ತಮ್ಮ ದೇಶದಲ್ಲಿ ವಿಧ್ವಂಸಕ ಚಟುವಟಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳಿಗೆ ದೇಶ ಬಿಡಲು ಸೂಚಿಸಿದೆ. ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ವಾಣಿಜ್ಯ ಸಲಹೆಗಾರ ರಾಜೇಶ್ ಅಗ್ನಿಹೋತ್ರಿ ಹಾಗೂ ಮಾಧ್ಯಮ ಸಲಹೆಗಾರ ಬಲಬೀರ್ ಸಿಂಗ್ ಅವರನ್ನು ಮಾತೃ ದೇಶಕ್ಕೆ ತೆರಳಲು ಸೂಚಿಸಿದೆ. ಈ ಇಬ್ಬರು ಅಧಿಕಾರಿಗಳ ಭಾವಚಿತ್ರವು ಪಾಕ್'ನ ವಿವಿಧ ಚಾನೆಲ್'ಗಳಲ್ಲಿ ಪ್ರಸಾರವಾಗಿದೆ. ಅಗ್ನಿಹೋತ್ರಿ ಭಾರತೀಯ ತನಿಖಾ ಸಂಸ್ಥೆ 'ರಾ'ಬಲಬೀರ್ ಸಿಂಗ್ಇಂಟಲಿಜೆನ್ಸ್ ಬ್ಯೂರೊ'ನೊಂದಿಗೆ ಸಂಬಂಧ ಹೊಂದಿದ್ದು ಇಬ್ಬರು ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred