ಪಾಕಿಸ್ತಾನ ಒಂದು ಸಣ್ಣದೇಶ, ಭಾರತೀಯ ಸೇನೆಗಳು ಇಸ್ಲಾಮಾಬಾದ್‌ಗೆ ತಕ್ಕ ಪ್ರತಿಕ್ರಿಯೆ ನೀಡಲಿವೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ನವದೆಹಲಿ: ಪಾಕಿಸ್ತಾನ ಒಂದು ಸಣ್ಣದೇಶ, ಭಾರತೀಯ ಸೇನೆಗಳು ಇಸ್ಲಾಮಾಬಾದ್‌ಗೆ ತಕ್ಕ ಪ್ರತಿಕ್ರಿಯೆ ನೀಡಲಿವೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

‘ಇಂಡಿಯಾ ಇನ್ಫ್ರಾಕಾನ್‌ 2018’ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಅವರು ಈ ಮಾತುಗಳನ್ನಾಡಿದರು. ‘ಪಾಕಿಸ್ತಾನ ಸಣ್ಣ ದೇಶ. ಪಾಕಿಸ್ತಾನ ಆಗಲಿ, ಚೀನಾ ಆಗಲಿ ನಮ್ಮ ಸೇನಾ ಪಡೆಗಳು ಅವುಗಳಿಗೆ ತಕ್ಕ ಉತ್ತರ ನೀಡಲು ಸಮರ್ಥವಾಗಿವೆ’ ಎಂದು ಪ್ರಧಾನ್‌ ತಿಳಿಸಿದರು.

‘ಪಾಕಿಸ್ತಾನ ಯಾವುದೇ ದೇಶದೊಂದಿಗೆ ಮಿತೃತ್ವದ ಸಂಬಂಧ ಹೊಂದಲು ಅರ್ಹವಾಗಿಲ್ಲ. ಅದು ಈಗ ಎಲ್ಲ ಮಿತಿಗಳನ್ನು ಮೀರುತ್ತಿದೆ’ ಎಂದು ಪ್ರಧಾನ್‌ ಹೇಳಿದರು.