Asianet Suvarna News Asianet Suvarna News

ಭಾರತದ ವಾಯುಗಡಿ ದಾಟಿದ ಪಾಕ್ ಹೆಲಿಕಾಪ್ಟರ್: ವಿಡಿಯೋ!

ಗಡಿಯಲ್ಲಿ ಮತ್ತೆ ಉದ್ಧಟತನ ಮೆರೆದ ಪಾಕ್ ಸೇನೆ! ಭಾರತದ ವಾಯುಗಡಿ ದಾಟಿ ಬಂದ ಪಾಕ್ ಹೆಲಿಕಾಪ್ಟರ್! ಹೆಲಿಕಾಪ್ಟರ್ ಹಾರಾಟದ ದೃಶ್ಯ ಕ್ಯಾಮರಾದಲ್ಲಿ ಸೆರೆ! ಭಾರತೀಯ ಸೈನಿಕರ ಚಲನವಲನ ನೋಡಲು ಬಂದಿದ್ದ ಹೆಲಿಕಾಪ್ಟರ್! ಪಾಕ್ ಉದ್ಧಟತನಕ್ಕೆ ಭಾರತೀಯ ಸೇನೆಯಿಂದ ತೀವ್ರ ಆಕ್ಷೇಪ 

Pakistan Helicopter Violates Indian Airspace
Author
Bengaluru, First Published Sep 30, 2018, 4:01 PM IST

ಶ್ರೀನಗರ(ಸೆ.30): ಅತ್ತ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಪಾಕಿಸ್ತಾನಿ ಪ್ರತಿನಿಧಿಗಳ ವಾಕ್ಸಮರ ಮುಂದುವರೆದಿರುವಂತೆಯೇ, ಇತ್ತ ಗಡಿಯಲ್ಲಿ ಪಾಕಿಸ್ತಾನ ಸೇನೆ ಮತ್ತೆ ತನ್ನ ಉದ್ಧಟತನ ಮುಂದುವರೆಸಿದೆ.

ಕಾಶ್ಮೀರದ ಪೂಂಚ್ ಜಿಲ್ಲೆಯ ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನಿ ಸೇನೆಯ ಹೆಲಿಕಾಪ್ಟರ್ ನಿಯಮ ಉಲ್ಲಂಘಿಸಿ ಭಾರತೀಯ ಗಡಿಯೊಳಗೆ ಹಾರಾಟ ನಡೆಸಿದೆ. ಈ ಬಗ್ಗೆ ಭಾರತೀಯ ಸೇನೆ ವಿಡಿಯೋ ಬಿಡುಗಡೆ ಮಾಡಿದ್ದು, ಬಿಳಿ ಬಣ್ಣದ ಹೆಲಿಕಾಪ್ಟರ್ ಪೂಚ್ ಜಿಲ್ಲೆಯ ಭಾರತೀಯ ಗಡಿಯೊಳಗೆ ಹಾರಾಟ ನಡೆಸಿದ್ದಲ್ಲದೇ ಸೈನಿಕರ ಚಲನವಲನದ ಮೇಲೆ ಕಣ್ಣಿರಿಸಿದೆ ಎಂದು ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆಯಷ್ಟೇ ಪ್ರಧಾನಿ ಮೋದಿ ತಮ್ಮ ವಾರದ ಮನ್ ಕಿ ಬಾತ್ ನಲ್ಲಿ ಸೇನೆ ಮತ್ತು ಗಡಿ ಭದ್ರತೆ ಕುರಿತಂತೆ ಮಾತನಾಡಿದ್ದರು. ಆದರೆ ಈ ಹೇಳಿಕೆ ಬೆನ್ನಲ್ಲೇ ಗಡಿಯಲ್ಲಿ ಸೇನಾ ಹೆಲಿಕಾಪ್ಟರ್ ಹಾರಿಸುವ ಮೂಲಕ ಪಾಕ್ ಸೇನೆ ಉದ್ಧಟತನದ ಪ್ರದರ್ಶನ ಮಾಡಿದೆ.

ಇನ್ನು ಈ ಬಗ್ಗೆ ಪಾಕಿಸ್ತಾನಿ ರೇಂಜರ್ಸ್ ಅಧಿಕಾರಿಗಳ ಬಳಿ ದೂರು ನೀಡಲು ಸೇನೆ ನಿರ್ಧರಿಸಿದೆ. ಅಲ್ಲದೆ ಘಟನೆ ಕುರಿತಂತೆ ಭಾರತೀಯ ಸೇನೆ ಗಂಭೀರ ಆಕ್ಷೇಪ ವ್ಯಕ್ತಪಿಸಿದೆ.

Follow Us:
Download App:
  • android
  • ios