ಚೀನಿ ಭಾಷೆ ಪಾಕಿಸ್ತಾನದಲ್ಲಿ ಅಧಿಕೃತ (ವೈರಲ್ ಚೆಕ್)

First Published 23, Feb 2018, 11:31 AM IST
Pakistan has not Adopted Mandarin as an official Language
Highlights

ಚೀನಿ ಭಾಷೆಯನ್ನು ಪಾಕಿಸ್ತಾನ ತನ್ನ ಅಧಿಕೃತ ಭಾಷೆಗಳ ಪಟ್ಟಿಗೆ ಸೇರಿಸಿದೆ. ಚೀನಾದ ‘ಮ್ಯಾಂಡರಿನ್’ ಭಾಷೆಯನ್ನು ಅಧಿಕೃತ ಭಾಷೆಗಳ ಪಟ್ಟಿಗೆ ಸೇರಿಸಲು ಪಾಕಿಸ್ತಾನ ಸಚಿವ ಸಂಪುಟ ಮಸೂದೆ ಅಂಗೀಕಾರ ಮಾಡಿದೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮವೊಂದು ವರದಿ ಮಾಡಿತ್ತು. ಅದಾದ ಕೆಲವೇ ಕ್ಷಣಗಳಲ್ಲಿ ಭಾರತದ ಸುದ್ದಿ ಮಾಧ್ಯಮಗಳು ಕೂಡ ಈ ಸುದ್ದಿಯನ್ನು ಪ್ರಕಟಿಸಿದ್ದವು.

ಇಸ್ಲಮಾಬಾದ್ : ಚೀನಿ ಭಾಷೆಯನ್ನು ಪಾಕಿಸ್ತಾನ ತನ್ನ ಅಧಿಕೃತ ಭಾಷೆಗಳ ಪಟ್ಟಿಗೆ ಸೇರಿಸಿದೆ. ಚೀನಾದ ‘ಮ್ಯಾಂಡರಿನ್’ ಭಾಷೆಯನ್ನು ಅಧಿಕೃತ ಭಾಷೆಗಳ ಪಟ್ಟಿಗೆ ಸೇರಿಸಲು ಪಾಕಿಸ್ತಾನ ಸಚಿವ ಸಂಪುಟ ಮಸೂದೆ ಅಂಗೀಕಾರ ಮಾಡಿದೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮವೊಂದು ವರದಿ ಮಾಡಿತ್ತು. ಅದಾದ ಕೆಲವೇ ಕ್ಷಣಗಳಲ್ಲಿ ಭಾರತದ ಸುದ್ದಿ ಮಾಧ್ಯಮಗಳು ಕೂಡ ಈ ಸುದ್ದಿಯನ್ನು ಪ್ರಕಟಿಸಿದ್ದವು.

ಅನಂತರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿತ್ತು. ಆದರೆ ನಿಜಕ್ಕೂ ಪಾಕಿಸ್ತಾನ ಚೀನಿ ಭಾಷೆಯನ್ನು ತನ್ನ ಅಧಿಕೃತ ಭಾಷೆಗಳ ಪಟ್ಟಿಯಲ್ಲಿ ಸೇರಿಸಲು ಮುಂದಾಗಿದೆಯೇ ಎಂದರೆ, ಈ ಸುದ್ದಿ ಸುಳ್ಳು. ಏಕೆಂದರೆ ಪಾಕಿಸ್ತಾನ ಈ ಕುರಿತ ವಿಧೇಯಕವನ್ನು ಪಾಸ್ ಮಾಡಿಯೇ ಇಲ್ಲ.

ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಡಿಯಲ್ಲಿ ಪಾಕಿಸ್ತಾನ ವಿದ್ಯಾರ್ಥಿಗಳಿಗೆ ಚೀನಿ ಭಾಷೆಯನ್ನು ಕಲಿಯುವ ಕೋರ್ಸ್‌ವೊಂದನ್ನು ಪ್ರಾರಂಭಿಸುವ ಮಸೂದೆಯನ್ನು ಪಾಕಿಸ್ತಾನ ಸಚಿವ ಸಂಪುಟ ಅಂಗೀಕಾರ ಮಾಡಿತ್ತು. ಸಂವಹನ ಕೊರತೆ ನೀಗಿಸಲು ಮತ್ತು ಉದ್ಯೋಗ ಭದ್ರತೆಯ ದೃಷ್ಟಿಯಿಂದ ಈ ಕಾಯ್ದೆಯನ್ನು ಜಾರಿಗೆ ತರಲು ಪಾಕ್ ಮುಂದಾಗಿತ್ತು.

ಇದೇ ಸುದ್ದಿಯನ್ನು ಮಾಧ್ಯಗಳು ತಪ್ಪಾಗಿ ಅರ್ಥೈಸಿವೆ. ಹಾಗಾಗಿ ಪಾಕಿಸ್ತಾನವು ಚೀನಾದ ‘ಮ್ಯಾಂಡರಿನ್’ ಭಾಷೆಯನ್ನು ತನ್ನ ಅಧಿಕೃತ ಭಾಷೆಗಳ ಪಟ್ಟಿಗೆ ಸೇರಿಸುವ ಕಾಯ್ದೆಗೆ ಅನುಮೋದನೆ ನೀಡಿದೆ ಎಂದು ವೈರಲ್ ಆಗಿರುವ ಸುದ್ದಿ ಸುಳ್ಳು.

loader