ಎರಡೂ ದೇಶಗಳ ನಡುವೆ ಮೇ 21, 2008ರಲ್ಲಿ ನಡೆದ ಕಾನ್ಸುಲರ್ ಪ್ರವೇಶ ಒಪ್ಪಂದಡಿ ಭಾರತದ ರಾಯಭಾರಿಯಾದ ಗೌತಮ್ ಬಾಂಬಾವಾಲೆ ಅವರಿಗೆ ಪಾಕ್ ಸರ್ಕಾರ ನೀಡಿದೆ.

ನವದೆಹಲಿ(ಜು.01): ಪಾಕಿಸ್ತಾನದ ಜೈಲುಗಳಲ್ಲಿ ಐನೂರು ಮೀನುಗಾರರು ಒಳಗೊಂಡಂತೆ 546 ಮಂದಿ ಬಂಧಿಯಾಗಿರುವ ಪಟ್ಟಿಯನ್ನು ಪಾಕ್ ಸರ್ಕಾರ ಭಾರತೀಯ ರಾಯಭಾರಿಗೆ ಹಸ್ತಾಂತರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡೂ ದೇಶಗಳ ನಡುವೆ ಮೇ 21, 2008ರಲ್ಲಿ ನಡೆದ ಕಾನ್ಸುಲರ್ ಪ್ರವೇಶ ಒಪ್ಪಂದಡಿ ಭಾರತದ ರಾಯಭಾರಿಯಾದ ಗೌತಮ್ ಬಾಂಬಾವಾಲೆ ಅವರಿಗೆ ಪಾಕ್ ಸರ್ಕಾರ ನೀಡಿದೆ. ಈ ಒಪ್ಪಂದದಂತೆ ಎರಡೂ ದೇಶಗಳು ಎರಡೂ ದೇಶಗಳು ತಮ್ಮ ದೇಶದಲ್ಲಿರುವ ವಿರುದ್ಧ ದೇಶದ ಕೈದಿಗಳನ್ನು ವರ್ಷಕ್ಕೆ 2 ಬಾರಿ ಜನವರಿ 1 ಹಾಗೂ ಜುಲೈ 1ರಂದು ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.

ವಿದೇಶಾಂಗ ಇಲಾಖೆಯ ಹೇಳಿಕೆಯಂತೆ ಭಾರತ ಸರ್ಕಾರ ಭಾರತದಲ್ಲಿರುವ ಪಾಕ್ ಕೈದಿಗಳ ಪಟ್ಟಿಯನ್ನು ನವದೆಹಲಿಯಲ್ಲಿರುವ ಪಾಕ್'ನ ವಿದೇಶಿ ರಾಯಭಾರಿಗೆ ಹಸ್ತಾಂತರಿಸಿದೆ. ಜನವರಿ 1 ರಂದು ಅಲ್ಲಿನ ಕೇಂದ್ರ ಸರ್ಕಾರ 54 ನಾಗರಿಕರು ಹಾಗೂ 297 ಮೀನುಗಾರರು ಒಳಗೊಂಡಂತೆ 351 ಭಾರತೀಯ ಕೈದಿಗಳ ಪಟ್ಟಿಯನ್ನು ಹಂಚಿಕೊಂಡಿತ್ತು.

ವಿದೇಶಿ ಕಚೇರಿಯ ಹೇಳಿಕೆಯಂತೆ ಈ ವರ್ಷದ ಜನವರಿ 6ರಂದು 219 ಮೀನುಗಾರರನ್ನು ಬಿಡುಗಡೆ ಮಾಡಲಾಗಿದ್ದು, ಜುಲೈ 10ರಂದು 77 ಮೀನುಗಾರರು ಹಾಗೂ ಓರ್ವ ನಾಗರಿಕನನ್ನು ಬಿಡುಗಡೆ ಮಾಡಲಿದೆ.