ಕೆಲ ದಿನಗಳ ಹಿಂದೆ ಸಂಭವಿಸಿದ ನಾಡಾ ಚಂಡಮಾರುತದ ಹೆಸರನ್ನು ಓಮನ್ ದೇಶ ನಾಮಕರಣ ಮಾಡಿತ್ತು. ಈ ಬಾರಿಯ ಚಂಡಮಾರುತಕ್ಕೆ ನಾಮಕರಣ ಮಾಡುವ ಸರದಿ ಪಾಕಿಸ್ತಾನದ್ದಾಗಿತ್ತು.
ಬೆಂಗಳೂರು(ಡಿ. 12): ಭಾರತದ ಆಗ್ನೇಯ ಭಾಗದ ಕರಾವಳಿ ಪ್ರದೇಶದಲ್ಲಿ ದಾಂದುಡಿ ಮಾಡುತ್ತಿರುವ ವಾರ್ಧಾ ಚಂಡಮಾರುತದ ಹೆಸರಿನ ಮೂಲ ಪಾಕಿಸ್ತಾನವಾಗಿದೆ. ಈ ಚಂಡಮಾರುತಕ್ಕೆ 'ವಾರ್ಧಾ' ಎಂದು ಹೆಸರು ಇಟ್ಟಿದ್ದೇ ಪಾಕಿಸ್ತಾನ. ಅರೇಬಿಕ್ ಮತ್ತು ಉರ್ದು ಭಾಷೆಯಲ್ಲಿ ಇದರ ಅರ್ಥ ಕೆಂಪು ಗುಲಾಬಿ ಎಂದಿದೆ.
ವಾರ್ಧಾ ಚಂಡಮಾರುತ ಈ ವರ್ಷ ಬಂಗಾಳಕೊಲ್ಲಿಯಲ್ಲಿ ಉಂಟಾದ ನಾಲ್ಕನೇ ಚಂಡಮಾರುತವಾಗಿದೆ. ಈ ಮುನ್ನ ರೌನು, ಕ್ಯಾಂಟ್ ಮತ್ತು ನಾಡಾ ಚಂಡಮಾರುತಗಳು ಬಂಗಾಳಕೊಲ್ಲಿಯಲ್ಲಿ ಅಪ್ಪಳಿಸಿದ್ದವು.
ಹಿಂದೂ ಮಹಾಸಾಗರ ಪ್ರದೇಶಗಳಲ್ಲಿ ಅಪ್ಪಳಿಸುವ ಚಂಡಮಾರುತಗಳ ಹೆಸರನ್ನು ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಥಾಯ್ಲೆಂಡ್, ಮಯನ್ಮಾರ್, ಮಾಲ್ಡೀವ್ಸ್ ಮತ್ತು ಓಮನ್ ರಾಷ್ಟ್ರಗಳು ಸರದಿ ಪ್ರಕಾರ ನಿರ್ಧರಿಸಲಿವೆ. ಕೆಲ ದಿನಗಳ ಹಿಂದೆ ಸಂಭವಿಸಿದ ನಾಡಾ ಚಂಡಮಾರುತದ ಹೆಸರನ್ನು ಓಮನ್ ದೇಶ ನಾಮಕರಣ ಮಾಡಿತ್ತು. ಈ ಬಾರಿಯ ಚಂಡಮಾರುತಕ್ಕೆ ನಾಮಕರಣ ಮಾಡುವ ಸರದಿ ಪಾಕಿಸ್ತಾನದ್ದಾಗಿತ್ತು.
