"ಆರೆಸ್ಸೆಸ್ ಒಂದು ಉಗ್ರ ಸಂಘಟನೆ. ಬಿಜೆಪಿಯು ಆರೆಸ್ಸೆಸ್'ನ ಅಂಗ ಸಂಸ್ಥೆಯಾಗಿದೆ. ಭಾರತದಲ್ಲೀಗ ಈ ಉಗ್ರರಿಂದ ಆಡಳಿತ ನಡೆಸಲಾಗುತ್ತಿದೆ. ಭಾರತೀಯರು ಉಗ್ರಗಾಮಿಯನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ," ಎಂದು ಆಸಿಫ್ ಖವಾಜ ವ್ಯಂಗ್ಯವಾಡಿದ್ದಾರೆ.
ನವದೆಹಲಿ(ಅ. 03): ಭಾರತ ಮತ್ತು ಪಾಕಿಸ್ತಾನ ನಡುವೆ ಉಗ್ರ ವಾಗ್ಯುದ್ಧದ ಬಿಸಿ ಏರುತ್ತಿದೆ. ಪಾಕಿಸ್ತಾನವನ್ನು ಉಗ್ರರ ರಫ್ತು ಕೇಂದ್ರ ಎಂದು ಬಣ್ಣಿಸಿದ ಭಾರತಕ್ಕೆ ಪಾಕಿಸ್ತಾನದ ವಿದೇಶಾಂಗ ಸಚಿವರು ಟಾಂಗ್ ಕೊಟ್ಟಿದ್ದಾರೆ. ಭಾರತದಲ್ಲಿ ಆಡಳಿತ ನಡೆಸುತ್ತಿರುವುದು ಉಗ್ರಗಾಮಿಗಳೇ ಎಂದು ಅಸಿಫ್ ಖವಾಜ ಟೀಕಿಸಿದ್ದಾರೆ.
ಜಿಯೋ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಾಕ್ ವಿದೇಶಾಂಗ ಸಚಿವರು, ಒಬ್ಬ ಉಗ್ರಗಾಮಿ ಪ್ರಧಾನಿಯಿಂದ ಭಾರತ ಮುನ್ನಡೆಸಲ್ಪಡುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನವನ್ನು ದೂಷಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ,
"ಆರೆಸ್ಸೆಸ್ ಒಂದು ಉಗ್ರ ಸಂಘಟನೆ. ಬಿಜೆಪಿಯು ಆರೆಸ್ಸೆಸ್'ನ ಅಂಗ ಸಂಸ್ಥೆಯಾಗಿದೆ. ಭಾರತದಲ್ಲೀಗ ಈ ಉಗ್ರರಿಂದ ಆಡಳಿತ ನಡೆಸಲಾಗುತ್ತಿದೆ. ಭಾರತೀಯರು ಉಗ್ರಗಾಮಿಯನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ," ಎಂದು ಆಸಿಫ್ ಖವಾಜ ವ್ಯಂಗ್ಯವಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಯಭಾರಿ ಈನಂ ಗಂಭೀರ್ ಅವರು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆ ವಿಚಾರದಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.
"ಹೆಚ್ಚೂಕಡಿಮೆ ಒಂದೇ ಘಳಿಗೆಯಲ್ಲಿ ಸ್ವಾತಂತ್ರ್ಯ ಪಡೆದ ಭಾರತ ಮತ್ತು ಪಾಕಿಸ್ತಾನ ದೇಶಗಳು ಈಗ ಹೇಗಿವೆ ಎಂಬುದನ್ನು ಪಾಕ್'ನ ರಾಜಕಾರಣಿಗಳು ಗಮನಿಸಲಿ. ಭಾರತವು ಈಗ ವಿಶ್ವದ ಐಟಿ ಸೂಪರ್ ಪವರ್ ಎಂದು ಪರಿಗಣಿತವಾಗಿದೆ. ಆದರೆ, ಪಾಕಿಸ್ತಾನವನ್ನು ಭಯೋತ್ಪಾಕರ ಉತ್ಪಾದನಾ ಕೇಂದ್ರವಾಗಿ ಗುರುತಿಸಲಾಗುತ್ತಿದೆ," ಎಂದು ಸುಷ್ಮಾ ಸ್ವರಾಜ್ ಗುಡುಗಿದ್ದರು.