ಆಟೋ ಮೇಲೆ ಪಾಕಿಸ್ತಾನದ ಧ್ವಜವಿದ್ದ ಪೋಸ್ಟರ್ ಅಂಟಿಸಿಕೊಂಡಿದ್ದ ಚಾಲಕನೊಬ್ಬನ ಮೇಲೆ ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ವಿಜಯಪುರ: ಆಟೋ ಮೇಲೆ ಪಾಕಿಸ್ತಾನದ ಧ್ವಜವಿದ್ದ ಪೋಸ್ಟರ್ ಅಂಟಿಸಿಕೊಂಡಿದ್ದ ಚಾಲಕನೊಬ್ಬನ ಮೇಲೆ ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ಆರೋಪಿಯು ಅಸಾದುದ್ದೀನ್ ಒವೈಸಿ ಭಾವಚಿತ್ರ ಹಾಗೂ ಎರಡು ಬದಿಯಲ್ಲಿ ಪಾಕಿಸ್ತಾನದ ಧ್ವಜವಿರುವ ಪೋಸ್ಟರ್ ಅನ್ನು ಆಟೋ ಮಧ್ಯದಲ್ಲಿ ಅಂಟಿಸಿಕೊಂಡು ಓಡಾಡುತ್ತಿದ್ದ.
ಈ ಬಗ್ಗೆ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ನೀಲಕಂಠ ಕಂದಗಲ್ ಅವರು ಗಾಂಧಿಚೌಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಟೋ ಚಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
