Asianet Suvarna News Asianet Suvarna News

ವೈರಲ್ ಚೆಕ್: ಕಾಸರಗೋಡಿನಲ್ಲಿ ರಾರಾಜಿಸಿದ ಪಾಕ್ ಧ್ವಜ?

ಕಾಸರಗೋಡಿನಲ್ಲಿ ರಾರಾಜಿಸಿದ ಪಾಕ್ ಧ್ವಜ | ಮಿಲಾದ್-ಉನ್-ನಬಿ ಸಮಾರಂಭದಲ್ಲಿ ಪಾಕಿಸ್ತಾನ ಧ್ವಜವನ್ನು ಹಾರಿಸಿದ್ದು ನಿಜನಾ? ಏನಿದು ಸುದ್ದಿ? ನಿಜನಾ ಈ ಸುದ್ದಿ? 

Pakistan flag hoist in Kasaragodu
Author
Bengaluru, First Published Nov 28, 2018, 11:09 AM IST

ಬೆಂಗಳೂರು (ನ. 28): ದ್ವಿಚಕ್ರ ವಾಹನದಲ್ಲಿ ಇಬ್ಬರು ಹಸಿರು ಬಣ್ಣದ ಬಾವುಟ ಹಿಡಿದು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಕೇರಳದ ಕಾಸರಗೋಡಿನಲ್ಲಿ ನಡೆದ ಮಿಲಾದ್-ಉನ್-ನಬಿ ಸಮಾರಂಭದಲ್ಲಿ ಪಾಕಿಸ್ತಾನ ಧ್ವಜವನ್ನು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ. 

ವಿಡಿಯೋದಲ್ಲಿ ದ್ವಿಚಕ್ರ ವಾಹನದಲ್ಲಿ ಇಬ್ಬರು ಹಸಿರು ಬಣ್ಣದ ಧ್ವಜ ಹಿಡಿದು ಹೋಗುತ್ತಿದ್ದಾರೆ. ಕಾರಿನಲ್ಲಿರುವ ವ್ಯಕ್ತಿ ಈ ವಿಡಿಯೋವನ್ನು ಚಿತ್ರೀಕರಿಸಿದ್ದರೆ, ಕೆಲವರು ಕಲ್ಲು ತೂರುತ್ತಾ ಬೆನ್ನಟ್ಟಿದ್ದಾರೆ. ಈ ವೇಳೆ ಪೊಲೀಸರು ಸನ್ನಿವೇಶವನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುವ ದೃಶ್ಯ ಇದೆ.  ವಾಟ್ಸ್‌ಆ್ಯಪ್ ಸಂದೇಶದಲ್ಲಿ ಇದೇ ವಿಡಿಯೋದೊಂದಿಗೆ,‘ಕೇರಳದ ಕಾಸರಗೋಡಿನಲ್ಲಿ ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ ಧ್ವಜ ಹಿಡಿದು ಹೋಗುತ್ತಿದ್ದವರನ್ನು ಬೆನ್ನಟ್ಟಿದ್ದಾರೆ.

ಈ ಸಂದೇಶವನ್ನು ಆದಷ್ಟು ಶೇರ್ ಮಾಡಿ’ ಎಂದು ಹೇಳಲಾಗಿದೆ. ಆದರೆ ನಿಜಕ್ಕೂ ದ್ವಿಚಕ್ರ ವಾಹನದಲ್ಲಿ ಪಾಕಿಸ್ತಾನ ಧ್ವಜ ಹಿಡಿದು ಹೋಗುತ್ತಿದ್ದುದು ನಿಜವೇ ಎಂದು ಪರಿಶೀಲಿಸಿದಾಗ ವಾಸ್ತವ ಬಯಲಾಗಿದೆ. ಪಾಕಿಸ್ತಾನ ಧ್ವಜವು ಬಳಿ ಬಣ್ಣದ ಪಟ್ಟಿಯನ್ನೊಳಗೊಂಡಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಧ್ವಜವು ಪೂರ್ಣ ಹಸಿರಾಗಿದ್ದು ಮಧ್ಯದಲ್ಲಿ ಚಂದ್ರ ಮತ್ತು ನಕ್ಷತ್ರ ಇದ್ದಂತಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸರ್ಕಲ್ ಇನ್ಸ್‌ಪೆಕ್ಟರ್ ಬೂಮ್‌ಗೆ ಸ್ಪಷ್ಟೀಕರಣ ನೀಡಿದ್ದು, ‘ಸಮಾರಂಭದ ದಿನ ಮುಸ್ಲಿಮರು ಹಿಂದುಗಳು ಬಹುಸಂಖ್ಯಾತರಿರುವ ಪ್ರದೇಶಕ್ಕೆ ಪ್ರವೇಶಿದ್ದರು. ಆ ವೇಳೆ ಪರಿಸ್ಥಿತಿ ಬಿಗಡಾಯಿಸಿತ್ತು. ಪೊಲೀಸರು ಎರಡೂ ಸಮುದಾಯದ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ’ ಎಂದಿದ್ದಾರೆ.

- ವೈರಲ್ ಚೆಕ್ 

Follow Us:
Download App:
  • android
  • ios