Asianet Suvarna News Asianet Suvarna News

ನೀವ್ ಸರಿಯೋ ವರೆಗೂ ನಾವ್ ಬಿಡಲ್ಲ: ಮುಕ್ತ ವಾಯು ಪ್ರದೇಶಕ್ಕೆ ಪಾಕ್ ನಕಾರ!

ಗಡಿಯಲ್ಲಿ ಭಾರತದ ಫೈಟರ್ ಜೆಟ್’ಗಳ ಠಿಕಾಣಿ| ವಾಯು ಪ್ರದೇಶ ಮುಕ್ತಗೊಳಿಸಲು ಪಾಕ್ ನಿರಾಕರಣೆ| ಫಾರ್ವರ್ಡ್ ವಾಯುನೆಲೆಗಳಿಂದ ಫೈಟರ್ ಜೆಟ್ ಹಿಂಪಡೆಯಲು ಆಗ್ರಹ| ಪಾಕಿಸ್ತಾನ ವಾಯುಯಾನ ಕಾರ್ಯದರ್ಶಿ ಶಾರೂಖ್ ನುಸ್ರತ್ ಸ್ಪಷ್ಟನೆ| ವಾಯುಪ್ರದೇಶ ಮುಕ್ತಗೊಳಿಸುವ ಭಾರತದ ಮನವಿ ತಿರಸ್ಕರಿಸಿದ ಪಾಕ್| ಬಾಲಾಕೋಟ್ ದಾಳಿ ಬಳಿಕ ವಾಯು ಪ್ರದೇಶ ಬಂದ್ ಮಾಡಿರುವ ಪಾಕಿಸ್ತಾನ|

Pakistan Denies To Open Airspace Until India Withdraws Fighter Jets
Author
Bengaluru, First Published Jul 12, 2019, 8:51 PM IST

ಇಸ್ಲಾಮಾಬಾದ್(ಜು.12): ಭಾರತ ಫಾರ್ವರ್ಡ್ ವಾಯುನೆಲೆಗಳಿಂದ ಫೈಟರ್ ಜೆಟ್'ಗಳನ್ನು ಹಿಂಪಡೆಯುವವರೆಗೂ, ತನ್ನ ವಾಯು ಪ್ರದೇಶವನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ತೆರೆಯುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಪಾಕಿಸ್ತಾನ ವಾಯುಯಾನ ಕಾರ್ಯದರ್ಶಿ ಶಾರೂಖ್ ನುಸ್ರತ್, ಫಾರ್ವರ್ಡ್ ನೆಲೆಗಳಿಂದ ಭಾರತೀಯ ವಾಯುಸೇನೆ ತನ್ನ ಫೈಟರ್ ಜೆಟ್’ಗಳನ್ನು ಹಿಂಪಡೆಯುವವರೆಗೂ ವಾಯು ಪ್ರದೇಶ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಭಾರತದ ಫೈಟರ್ ಜೆಟ್’ಗಳು ಗಡಿಯಲ್ಲೇ ಠಿಕಾಣಿ ಹೂಡಿದ್ದು, ಈ ಸಂದರ್ಭದಲ್ಲಿ ಭದ್ರತೆಯ ಕಾರಣದಿಂದ ವಾಯು ಪ್ರದೇಶ ಮುಕ್ತಗೊಳಿಸುವ ಭಾರತದ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.

ಫೆ.26 ರಂದು ಭಾರತೀಯ ವಾಯುಪಡೆ ಬಾಲಾಕೋಟ್’ ವಾಯುದಾಳಿಯ ನಡೆಸಿದ ಬಳಿಕ, ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.

Follow Us:
Download App:
  • android
  • ios