ದುಬೈ(ಸೆ.06): ಐಸಿಸಿ ಬಿಡುಗಡೆ ಮಾಡಿರುವ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನ ತಂಡವು 9ನೇ ಸ್ಥಾನಕ್ಕೆ ಕುಸಿದಿದ್ದು, ಈ ಹಿನ್ನಲೆಯಲ್ಲಿ ಮುಂದಿನ ವಿಶ್ವಕಪ್'ಗೆ ನೇರ ಪ್ರವೇಶ ಪಡೆಯುವ ವಿಚಾರದಲ್ಲಿ ಪಾಕ್ ಕ್ರಿಕೆಟ್ ತಂಡ ಸಂಕಷ್ಟಕ್ಕೆ ಸಿಲುಕಿದೆ.
ಇಂಗ್ಲೆಂಡ್ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯನ್ನು 4-1 ರಿಂದ ಸೋಲುವ ಮೂಲಕ ಐಸಿಸಿ ಶ್ರೇಯಾಂಕದಲ್ಲಿ ಪಾಕಿಸ್ತಾನ ತಂಡ ಭಾರಿ ಹಿನ್ನಡೆ ಅನುಭವಿಸಿದೆ. ಪಾಕಿಸ್ತಾನ ತಂಡ ಏಕದಿನದಲ್ಲಿ ಇದೇ ರೀತಿಯ ಪ್ರರ್ದಶನ ಮುಂದುವರೆಸಿದರೆ 2019ರ ಏಕದಿನ ವಿಶ್ವಕಪ್ಗೆ ನೇರ ಪ್ರವೇಶ ಪಡೆಯುವುದು ಕಷ್ಟವಾಗಿದೆ.
9ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ ಮುಂಬರುವ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತನ್ನ ಸ್ಥಾನವನ್ನು ಸುಧಾರಿಸಿಕೊಳ್ಳದಿದ್ದರೆ, ಇಂಗ್ಲೆಂಡ್ನಲ್ಲಿ ನಡೆಯುವ 2019ರ ವಿಶ್ವಕಪ್ನಲ್ಲಿ ಪಾಕ್ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಆಡಿ ವಿಶ್ವಕಪ್ಗೆ ಪ್ರವೇಶ ಪಡೆಯುವಂತಹ ಸ್ಥಿತಿ ನಿರ್ಮಾಣವಾಗಲಿದೆ.
