ಪಾಕಿಸ್ತಾನದ ಕ್ಲಬ್ ಪರ ಆಟವಾಡುತ್ತಿದ್ದ ಜುಬೈರ್ ಅಹ್ಮದ್ ಮೃತಪಟ್ಟ ಆಟಗಾರ. ಫಾಖಾರ್ ಜಮಾನ್ಸ್ ಅಕಾಡೆಮಿ ಪರ ಆಡುತ್ತಿದ್ದ ಈತ ಪ್ರತಿಭಾನ್ವಿತ ದಾಂಡಿಗನಾಗಿದ್ದ.
ಬೌನ್ಸರ್ ಬಾಲ್ ತಲೆಗೆ ಬಡಿದು ಕ್ರಿಕೆಟಿಗನೊಬ್ಬ ಮೃತಪಟ್ಟ ಘಟನೆ ಪಾಕಿಸ್ತಾನದ ಖೈಬರ್ ಪ್ರಾಂತ್ಯದ ಮರ್ದಾನ್ ಜಿಲ್ಲೆಯಲ್ಲಿ ನಡೆದಿದೆ.
ಪಾಕಿಸ್ತಾನದ ಕ್ಲಬ್ ಪರ ಆಟವಾಡುತ್ತಿದ್ದ ಜುಬೈರ್ ಅಹ್ಮದ್ ಮೃತಪಟ್ಟ ಆಟಗಾರ. ಫಾಖಾರ್ ಜಮಾನ್ಸ್ ಅಕಾಡೆಮಿ ಪರ ಆಡುತ್ತಿದ್ದ ಈತ ಪ್ರತಿಭಾನ್ವಿತ ದಾಂಡಿಗನಾಗಿದ್ದ. ಜುಬೈರ್ ಹೆಲ್ಮೆಟ್ ಧರಿಸದೆ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಬೌಲರ್ ಹಾಕಿದ ಚಂಡು ಬೌನ್ಸ'ರ್ ಆಗಿ ಈತನ ತಲೆಗೆ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈತನ ಸಾವಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ವಿವಿಧ ದೇಶದ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ. 2014ರಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ಕ್ಲಬ್'ನಲ್ಲಿ ಇದೇ ರೀತಿಯ ಘಟನೆ ನಡೆದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅಲ್ಲಿನ ಕ್ಲಬ್ ಪರ ಆಟವಾಡುತ್ತಿದ್ದ ಫಿಲಿಪ್ ಹ್ಯೂಸ್ ಕೂಡ ಮೃತಪಟ್ಟಿದ್ದ. ಭಾರತದ ಕ್ರಿಕೆಟಿಗ ರಮಣ್ ಲಾಂಬ ಕೂಡ ಚಂಡು ತಲೆಗೆ ಬಡಿದು ಸಾವಿಗೀಡಗಿದ್ದರು.
