ಮನೆಗೆ ಮೋದಿ ಬರ ಹೇಳಿ 3 ಲಕ್ಷ ಬಿಲ್‌ ಕೊಟ್ಟಪಾಕ್‌ ಪ್ರಧಾನಿ ಷರೀಫ್‌!

First Published 20, Feb 2018, 9:00 AM IST
Pakistan Bills India Rs 3 lakh for PM Modis Lahore stopover
Highlights

ನಮ್ಮಲ್ಲಿ ‘ಅತಿಥಿ ದೇವೋಭವ’ ಎಂಬ ನೀತಿಯಿದೆ. ಆದರೆ, ಪಾಕಿಸ್ತಾನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಿಕೊಂಡು, ಆತಿಥ್ಯ ನೀಡಿದ್ದ ಅಲ್ಲಿನ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಭಾರತಕ್ಕೆ 3 ಲಕ್ಷ ರು. ಬಿಲ್‌ ಕಳುಹಿಸಿಕೊಟ್ಟವಿಷಯ ಬೆಳಕಿಗೆ ಬಂದಿದೆ.

ನವದೆಹಲಿ: ನಮ್ಮಲ್ಲಿ ‘ಅತಿಥಿ ದೇವೋಭವ’ ಎಂಬ ನೀತಿಯಿದೆ. ಆದರೆ, ಪಾಕಿಸ್ತಾನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಿಕೊಂಡು, ಆತಿಥ್ಯ ನೀಡಿದ್ದ ಅಲ್ಲಿನ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಭಾರತಕ್ಕೆ 3 ಲಕ್ಷ ರು. ಬಿಲ್‌ ಕಳುಹಿಸಿಕೊಟ್ಟವಿಷಯ ಬೆಳಕಿಗೆ ಬಂದಿದೆ.

ಪ್ರಧಾನಿ ಪ್ರವಾಸದ ವೇಳೆ ತಮ್ಮ ಮಾರ್ಗ ಬಳಸಿದ್ದುದಕ್ಕಾಗಿ ಭಾರತೀಯ ವಾಯು ಸೇನೆಗೆ ಪಾಕಿಸ್ತಾನ 2.86 ಲಕ್ಷ ರು. ನ್ಯಾವಿಗೇಶನ್‌ ಶುಲ್ಕ ವಿಧಿಸಿದೆ. ಆರ್‌ಟಿಐ ಅರ್ಜಿಯೊಂದಕ್ಕೆ ದೊರೆತ ಪ್ರತಿಕ್ರಿಯೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ.

ಕಳೆದ ವರ್ಷ ರಷ್ಯಾ, ಅಷ್ಘಾನಿಸ್ತಾನ, ಇರಾನ್‌, ಕತಾರ್‌ ಭೇಟಿಯ ಬಳಿಕ ಸ್ವದೇಶಕ್ಕೆ ಹಿಂದಿರುಗುತ್ತಿದ್ದ ಪ್ರಧಾನಿ ಮೋದಿಯವರನ್ನು ಆಗಿನ ಪಾಕ್‌ ಪ್ರಧಾನಿ ಷರೀಫ್‌ ಮಗಳ ಮದುವೆ ಪ್ರಯುಕ್ತ ಆಹ್ವಾನಿಸಿ, ಆತಿಥ್ಯ ನೀಡಿದ್ದರು. ಈ ಸಂದರ್ಭದ ಪ್ರಯಾಣಕ್ಕಾಗಿ 1.49 ಲಕ್ಷ ರು. ಶುಲ್ಕ ವಿಧಿಸಲಾಗಿದೆ. 2016, ಮೇ 22-23ರಂದು ಇರಾನ್‌ ಮತ್ತು 2016, ಜೂ. 4-6ರಂದು ಕತಾರ್‌ ಪ್ರಯಾಣಕ್ಕಾಗಿ ಪ್ರಧಾನಿಗೆ ಪಾಕ್‌ ಆಡಳಿತ ನ್ಯಾವಿಗೇಷನ್‌ ಶುಲ್ಕ ವಿಧಿಸಿತ್ತು.

ಬೇರೆ ದೇಶದ ವಿಮಾನವೊಂದು ತನ್ನ ವಾಯುಸೀಮೆಯನ್ನು ಬಳಸಿಕೊಂಡ ಎಲ್ಲಾ ದೇಶಗಳು ಈ ರೀತಿಯ ಶುಲ್ಕ ವಿಧಿಸುತ್ತವೆ.

loader