ಗಡಿ ಮೂಲಕ ಭಾರತದೊಳಗೆ ಉಗ್ರರನ್ನು ನುಸುಳಿಸುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಲು ಭಾರತೀಯ ಸೇನೆಯು ಎಲ್'ಓಸಿಯಲ್ಲಿರುವ ಪಾಕ್ ಬಂಕರ್'ಗಳನ್ನು ನಾಶಪಡಿಸಿದೆ. ದಾಳಿಯ ವಿಡಿಯೋವನ್ನು ಸೇನೆ ನಿನ್ನೆ ಬಿಡುಗಡೆ ಮಾಡುವ ಮೂಲಕ ಶತ್ರು ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶವನ್ನೂ ನೀಡಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನೂ ಅನೇಕ ದಾಳಿಗಳಾಗುತ್ತವೆ ಎಂದೂ ಎಚ್ಚರಿಕೆ ನೀಡಿದೆ. ಭಾರತದ ಈ ದಿಟ್ಟ ಕ್ರಮ ಪಾಕಿಸ್ತಾನವನ್ನು ಮಾನಸಿಕವಾಗಿ ಘಾಸಿಗೊಳಿಸಿರುವ ಸಾಧ್ಯತೆ ಇದೆ.
ನವದೆಹಲಿ(ಮೇ 24): ಗಡಿನಿಯಂತ್ರಣ ರೇಖೆಯ ಪಾಕಿಸ್ತಾನೀ ಬಂಕರ್'ಗಳನ್ನು ಭಾರತೀಯ ಸೇನೆ ಉಡೀಸ್ ಮಾಡಿದ ಘಟನೆ ಶತ್ರು ರಾಷ್ಟ್ರದ ನಿದ್ದೆಗೆಡಿಸಿದೆ. ಯುದ್ಧಭೀತಿಯಲ್ಲಿ ಸಿಲುಕಿರುವ ಪಾಕಿಸ್ತಾನ ವಾಯುಪಡೆಯು ಗಡಿಯಲ್ಲಿರುವ ತನ್ನೆಲ್ಲಾ ವಾಯುನೆಲೆಗಳನ್ನು ಸಕ್ರಿಯಗೊಳಿಸಿದೆ. ಪಾಕಿಸ್ತಾನದ ಯುದ್ಧವಿಮಾನಗಳು ತಾಲೀಮು ನಡೆಸುವ ಕಾರ್ಯವನ್ನು ಆರಂಭಿಸಿವೆ.
ಸಿಯಾಚಿನ್ ನೆಲೆಯ ಮೇಲೆ ಪಾಕಿಸ್ತಾನದ ಮಿರೇಜ್ ಫೈಟರ್ ಜೆಟ್'ಗಳು ಹಾರಾಟ ನಡೆಸಿದ್ದರ ದೃಶ್ಯವನ್ನು ಪಾಕಿಸ್ತಾನ ಮಾಧ್ಯಮಗಳು ಪ್ರಸಾರ ಮಾಡಿವೆ. ಪಾಕಿಸ್ತಾನದ ವಾಯುಪಡೆ ಮುಖ್ಯಸ್ಥ ಸೊಹೇಲ್ ಅಮನ್ ಅವರೇ ಖುದ್ದಾಗಿ ಈ ತಾಲೀಮು ಕಾರ್ಯಾಚರಣೆಯನ್ನು ಪರಿವೀಕ್ಷಿಸುತ್ತಿದ್ದಾರೆನ್ನಲಾಗಿದೆ.
ಗಡಿ ಮೂಲಕ ಭಾರತದೊಳಗೆ ಉಗ್ರರನ್ನು ನುಸುಳಿಸುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಲು ಭಾರತೀಯ ಸೇನೆಯು ಎಲ್'ಓಸಿಯಲ್ಲಿರುವ ಪಾಕ್ ಬಂಕರ್'ಗಳನ್ನು ನಾಶಪಡಿಸಿದೆ. ದಾಳಿಯ ವಿಡಿಯೋವನ್ನು ಸೇನೆ ನಿನ್ನೆ ಬಿಡುಗಡೆ ಮಾಡುವ ಮೂಲಕ ಶತ್ರು ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶವನ್ನೂ ನೀಡಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನೂ ಅನೇಕ ದಾಳಿಗಳಾಗುತ್ತವೆ ಎಂದೂ ಎಚ್ಚರಿಕೆ ನೀಡಿದೆ. ಭಾರತದ ಈ ದಿಟ್ಟ ಕ್ರಮ ಪಾಕಿಸ್ತಾನವನ್ನು ಮಾನಸಿಕವಾಗಿ ಘಾಸಿಗೊಳಿಸಿರುವ ಸಾಧ್ಯತೆ ಇದೆ.
ಮೇ 13ರಂದು ಭಾರತವು ಕದನವಿರಾಮ ನಿಯಮ ಉಲ್ಲಂಘಿಸಿ ತನ್ನ ಗಡಿಭಾಗದಲ್ಲಿ ದಾಳಿ ಮಾಡಿ, ಅಮಾಯಕ ನಾಗರಿಕರನ್ನು ಟಾರ್ಗೆಟ್ ಮಾಡಿತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನವು ನೌಶೇರಾ ಸೆಕ್ಟರ್'ನಲ್ಲಿ ಭಾರತದ ಪೋಸ್ಟ್'ಗಳನ್ನು ನಾಶಪಡಿಸಿತು ಎಂದು ಪಾಕಿಸ್ತಾನದ ಸೇನಾಧಿಕಾರಿಗಳು ಹೇಳಿಕೊಂಡಿದ್ದಾರೆ.