ಅಕ್ರಮ ಇಂಟರ್‌ನೆಟ್‌ ಕರೆ (ವಿಒಐಪಿ)ಗಳ ಟೆಲಿಫೋನ್‌ ಎಕ್ಸ್‌ಚೇಂಜ್‌ಗಳು ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯಲ್ಲಿ ಪತ್ತೆಯಾಗಿದ್ದು ಪಾಕಿಸ್ತಾನದ ಗುಪ್ತಚರ ಏಜೆನ್ಸಿಯು ಸೇನಾ ರಹಸ್ಯಗಳನ್ನು ಪಡೆಯಲು ಇವುಗಳನ್ನು ಬಳಸಿಕೊಳ್ಳುತ್ತಿತ್ತು ಎನ್ನಲಾಗಿದೆ.
ಈ ಅಡ್ಡೆಗಳು ಕಳೆದು ಆರು ತಿಂಗಳಿನಿಂದ ಲಾತೂರ್ ಜಿಲ್ಲೆ ದೇವನಿಯ ಪ್ರಕಾಶ್ನಗರ, ಛಕೂರ್ ಪ್ರದೇಶದಲ್ಲಿ ಕಾರ್ಯರ್ನಿಹಿಸುತ್ತಿದ್ದವು. ಈ ಸಂಬಂಧ ಶಂಕರ್ ಬಿರಾದಾರ್, ರವಿ ಸಾಬಡೆ ಎಂಬುವರನ್ನು ಬಂಧಿಸಿ 96 ಸಿಮ್ಕಾರ್ಡ್ಗಳು ಸೇರಿ ಹಲವು ಉಪಕರಣ ವಶಕ್ಕೆ ಪಡೆಯಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಮೂಲದ ಸೇನಾ ಗುಪ್ತಚರ ಸಂಸ್ಥೆಗಳ ಮಾಹಿತಿ ಮೇರೆಗೆ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ, ಲಾತೂರ್ ಪೊಲೀಸರು ಹಾಗೂ ದೂರ ಸಂಪರ್ಕ ಇಲಾಖೆ ಅಧಿಕಾರಿಗಳ ಜಂಟಿ ತಂಡ ಈ ಅಕ್ರಮ ಟೆಲಿಫೋನ್ ಎಕ್ಸ್ಚೇಂಜ್ಗಳ ಮೇಲೆ ದಾಳಿ ನಡೆಸಿದೆ. ಬಂಧಿತರು ವಿದೇಶದಿಂದ ಇಂಟರ್ನೆಟ್ ಕರೆ ಸ್ವೀಕರಿಸಿ, ಭಾರತದ ವ್ಯಕ್ತಿಗಳಿಗೆ ವಾಯ್್ಸ ಕರೆಗಳನ್ನಾಗಿ ವರ್ಗಾಯಿಸುವ ಮೂಲಕ ಅಕ್ರಮ ಅಂತಾರಾಷ್ಟ್ರೀಯ ದ್ವಾರ ಮಾಡಿಕೊಂಡಿದ್ದರು.
