ಇಸ್ಲಾಮಾಬಾದ್‌[ಸೆ.16]: ಪ್ರಧಾನಿ ನರೇಂದ್ರ ಮೋದಿ ಮೇಲೆ ಹಾವು ದಾಳಿ ನಡೆಸಲಾಗುವುದು ಎಂದು ಹೇಳಿದ್ದ ಪಾಕಿಸ್ತಾನದ ಪಾಪ್‌ ಗಾಯಕಿ ರಬಿ ಫಿರ್ಜಾದಾಗೆ ಈಗ ಜೈಲು ಭೀತಿ ಎದುರಾಗಿದೆ.

ವನ್ಯಜೀವಿ ಕಾಯ್ದೆ ಪ್ರಕಾರ ಅಪಾಯಕಾರಿ ಪ್ರಾಣಿಗಳನ್ನು ಹೊಂದುವಂತಿಲ್ಲ. ಆದರೆ, ಗಾಯಕಿ ಫಿರ್ಜಾದಾ ಕೋಬ್ರಾ, ಸಿಂಹ, ಹಾವು, ಮೊಸಳೆಯಂತಹ ಅಪಾಯಕಾರಿ ಪ್ರಾಣಿಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದು, ಕಾನೂನು ಉಲ್ಲಂಘನೆ ಆರೋಪ ಎದುರಿಸುತ್ತಿದ್ದಾಳೆ. ಇದರಿಂದ ಫಿರ್ಜಾದಾಗೆ 2-3 ವರ್ಷ ಜೈಲು ಶಿಕ್ಷೆ, 20 ಸಾವಿರ ರು. ದಂಡ ಕಟ್ಟಬೇಕಾದ ಭೀತಿ ಇದೆ.

ಜಮ್ಮು- ಕಾಶ್ಮೀರಕ್ಕೆ ವಿಶೇಷಾಧಿಕಾರ ರದ್ದುಗೊಳಿಸಿದ ಬಳಿಕ ಮೋದಿ ಉದ್ದೇಶಿಸಿ ‘ಹಾವುಗಳು ನಿಮಗಾಗಿ ಕಾದಿವೆ’ ಎಂದು ಬೆದರಿಕೆ ಹಾಕಿದ್ದ ವಿಡಿಯೋ ಹರಿಬಿಟ್ಟಿದ್ದರು. ಅರಣ್ಯ ಇಲಾಖೆ ಇದರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.