ಬೆಂಗಳೂರು(ನ.22): ಮುಸ್ಸಂಜೆ ವೇಳೆ ನೀಲಿ ಆಕಾಶದಲ್ಲಿ ಸೂರ್ಯನಂತೆ ಕಂಗೊಳಿಸುವ ಇದು ಮನೆಗಳಲ್ಲಿ ಇಡುವ ಶೋ ಪೀಸ್. ಅಂದಹಾಗೆ ಇದು ಎಲ್ಲೆಂದರಲ್ಲಿ ಸಿಗೋದಿಲ್ಲ. ಇದು ಸಿಗೋದು ಪಾಕಿಸ್ತಾನ ಪಂಜಾಬ್ ಪ್ರದೇಶದಲ್ಲಿ ಮಾತ್ರ.

ಅಂದಹಾಗೆ ಇದು ಕಲ್ಲುಪ್ಪು. ಪಂಜಾಬ್ ಪ್ರದೇಶದ ಗಣಿ ಭಾಗದಲ್ಲಿ ಮಾತ್ರ ಈ ಹಿಮಾಲಯನ್ ಸಾಲ್ಟ್ ಸಿಗುತ್ತದೆ. ಗಾಢ ಕೆಂಪು ಗುಲಾಬಿ ಮತ್ತು ಅರೆ ಬಿಳಿ ಬಣ್ಣದ ರೂಪದಲ್ಲಿ ಸಿಗುವ ಈ ಹಿಮಾಲಯನ್ ಸಾಲ್ಟ'ನ್ನು  ಭೂಮಿ ಮೇಲೆ ಸಿಗುವ ಅತ್ಯಂತ ಶುದ್ದ ಉಪ್ಪೆಂದು ನಂಬಲಾಗಿದೆ.   ಕಲಾವಿದ ಪ್ರಕಾಶ್  ಎಂಬುವವರು ಈ ಹಿಮಾಲಯನ್ ಸಾಲ್ಟ್ ನ್ನು  ಪಾಕಿಸ್ತಾನದ ಪಂಜಾಬಿನಿಂದ ತಂದು  ಬೆಂಗಳೂರಿನಲ್ಲಿ ಮಾರಾಟ ಮಾಡ್ತಿದ್ದಾರೆ. ಸುಮಾರು 4 ರಿಂದ 10 ಕೆಜಿ ಯ ವರೆಗೂ ಕಲ್ಲಿನ ರೂಪದಲ್ಲಿ ಸಿಗುವ ಈ ಸಾಲ್ಟ್‌ನ್ನು ಪ್ರಕಾಶ್, ಗೋಲಾಕಾರ, ರೋಸ್  ಹಾಗೂ ಪಿರಾಮಿಡ್ ಶೇಪ್ ಗಳಾಗಿ ಕೆತ್ತುತ್ತಾರೆ. ವಿವಿಧ ಆಕಾರಗಳಲ್ಲಿ ಸಿದ್ಧವಾಗುವ ಈ ಸಾಲ್ಟ್ ಗೆ ಸಣ್ಣ ಬಲ್ಬ್ ಅನ್ನು  ಫಿಕ್ಸ್ ಮಾಡಿ ಸ್ವಿಚ್ ಆನ್ ಮಾಡಿದ್ರೆ ವಿವಿಧ ಬಣ್ಣಗಳಲ್ಲಿ ಕಂಗೊಳಿಸುತ್ತದೆ. 

ಈ ಸಾಲ್ಟ್ ವಿಶೇಷ

ಈ ಹಿಮಾಲಯನ್ ಸಾಲ್ಟ್‌ ಅಡುಗೆಗೆ ಬಳಸುವುದರಿಂದ ರಕ್ತದೊತ್ತಡ, ಮಧುಮೇಹ ತಡೆಗಟ್ಟಲಿದೆಯಂತೆ. ಜೊತೆಗೆ  ಮನೆಯ ಒಳಾಂಗಣದಲ್ಲಿ ಅಥವಾ ಬೆಡ್ ರೂಂನಲ್ಲಿ  ಇಡುವುದರಿಂದ  ಚೆನ್ನಾಗಿ ನಿದ್ದೆ ಮಾಡಬಹುದಂತೆ.  ಇಷ್ಟೆ  ಅಲ್ದೇ ಅಸ್ತಮಾ, ಅಲರ್ಜಿ, ಖಿನ್ನತೆ, ಚರ್ಮದ ಕ್ಯಾನ್ಸರ್ ನಂತಹ ಸಮಸ್ಯೆಗಳಿಂದಲೂ ಕೂಡ ದೂರವಿರಬಹುದಂತೆ. ಹಾಗಾದ್ರೆ ತಡ ಏಕೆ  ನೀವು ಕೂಡ ಒಂದ್ಸಲ ಟ್ರೈ ಮಾಡಿ.

ವರದಿ: ಮುತ್ತಪ್ಪ ಲಮಾಣಿ, ಸುವರ್ಣ ನ್ಯೂಸ್