ಮತ್ತೆ 100 ಭಾರತೀಯ ಬೆಸ್ತರು ಪಾಕಿಸ್ತಾನದಿಂದ ಇಂದು ತಾಯ್ನಾಡಿಗೆ| ವೈಮನಸ್ಸಿನ ನಡುವೆ ಉತ್ತಮ ನಡತೆ ತೋರಿದ ಮೀನುಗಾರರು ನಿರಾಳ

ಇಸ್ಲಾಮಾಬಾದ್‌[ಏ.15]: ಪುಲ್ವಾಮಾ ಉಗ್ರದಾಳಿ ನಂತರದಲ್ಲಿ ಭಾರತ-ಪಾಕ್‌ನ ಬಾಂಧವ್ಯದಲ್ಲಿ ಉಂಟಾಗಿದ್ದ ವೈಮಸ್ಸಿನ ಮಧ್ಯೆಯೂ ‘ಉತ್ತಮ ನಡತೆಯ’ ತೋರಿದ 100 ಮೀನುಗಾರರನ್ನು ಪಾಕಿಸ್ತಾನ ಶನಿವಾರ ಬಿಡುಗಡೆ ಮಾಡಿದೆ.

ಇವರನ್ನು ಕರಾಚಿಯ ಮಾಲಿರ್‌ ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಇವರೆಲ್ಲಾ ರೈಲು ಮೂಲಕ ಲಾಹೋರ್‌ ಮಾರ್ಗವಾಗಿ ವಾಘಾ ಗಡಿಗೆ ಬಂದು, ಅಲ್ಲಿಂದ ತಾಯ್ನಾಡಿಗೆ ಹೆಜ್ಜೆ ಇಡಲಿದ್ದಾರೆ. ಒಟ್ಟು 360 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಪಾಕ್‌ ನಿರ್ಧರಿಸಿದ್ದು, ಈ ಪೈಕಿ ಇದುವರೆಗೆ 200 ಜನರನ್ನು ಬಿಡುಗಡೆ ಮಾಡಿದಂತೆ ಆಗಿದೆ.

Scroll to load tweet…

ಉಳಿದವರನ್ನು ಇದೇ ತಿಂಗಳಲ್ಲಿ ಇನ್ನೂ 2 ಹಂತದಲ್ಲಿ ಬಿಡುಗಡೆ ಮಾಡಲಾಗುವುದು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.