ಹಿಜ್ಬುಲ್‌ ಉಗ್ರರನ್ನು ಹುತಾತ್ಮ ಸೈನಿಕರೆಂದು ಬಣ್ಣಿಸಿ ಅವರ ಹೆಸರಿನಲ್ಲಿ  ಅಂಚೆ ಚೀಟಿ ಬಿಡುಗಡೆ ಮಾಡಿದೆ. ಈ ಮೂಲಕ ಪಾಕಿಸ್ತಾನ ಮತ್ತೊಮ್ಮೆ  ಉಗ್ರರನ್ನು ವೈಭವೀಕರಿಸಿದೆ. 

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದಿ ಕೃತ್ಯದಲ್ಲಿ ತೊಡಗಿದ್ದ ವೇಳೆ, ಭಾರತೀಯ ಯೋಧರಿಂದ ಹತ್ಯೆಗೀಡಾದ ಕಾಶ್ಮೀರದ ಹಿಜ್ಬುಲ್‌ ಉಗ್ರ ಬುರ್ಹಾನ್‌ ವಾನಿಯನ್ನು ಮತ್ತೊಮ್ಮೆ ಪಾಕಿಸ್ತಾನ ವೈಭವೀಕರಿಸುವ ಕೆಲಸ ಮಾಡಿದೆ.

ಹಿಜ್ಬುಲ್‌ ಉಗ್ರರನ್ನು ಹುತಾತ್ಮ ಸೈನಿಕರೆಂದು ಬಣ್ಣಿಸಿರುವ ಪಾಕಿಸ್ತಾನ, ಆತನ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದೆ.

ವಾನಿ ಮಾತ್ರವಲ್ಲದೇ, ಕಾಶ್ಮೀರಿ ಉಗ್ರರಾದ ಬ್ರೇಡ್‌ ಚಾಪರ್‌ ಹಾಗೂ ಮಾನವ ಗುರಾಣಿ ಸೇರಿದಂತೆ ಒಟ್ಟು 19 ಸ್ಟಾಂಪ್‌ಗಳನ್ನು ಪಾಕಿಸ್ತಾನ ಅಂಚೆ ಇಲಾಖೆ ಬಿಡುಗಡೆ ಮಾಡಿದೆ. 

ಆನ್‌ಲೈನ್‌ನಲ್ಲಿ ಈ ಅಂಚೆ ಚೀಟಿಗಳು 500 ರು.ಗೆ ಮಾರಾಟಕ್ಕೆ ಇದ್ದರೆ, ಬೇರೆಡೆ 8 ಪಾಕಿಸ್ತಾನಿ ರುಪಾಯಿಗೆ ಮಾರಾಟವಾಗುತ್ತಿದೆ. 2016ರ ಜು.8ರಂದು ಭದ್ರತಾ ಪಡೆಗಳು ವಾನಿಯನ್ನು ಹತ್ಯೆಗೈದಿದ್ದವು. ಬಳಿಕ ಕಾಶ್ಮೀರದಲ್ಲಿ ಭಾರೀ ಹಿಂಸಾಚಾರ ಸಂಭವಿಸಿ 85 ನಾಗರಿಕರು ಸಾವನ್ನಪ್ಪಿದ್ದರು.