ಟೆಹರನ್(ಏ.23): ಇರಾನ್ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಯಡವಟ್ಟು ಮಾಡಿಕೊಂಡಿದ್ದಾರೆ. ಇರಾನ್ ಅಧ್ಯಕ್ಷ ಹಸನ್ ರೌಹಾನಿ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಪೂರ್ವ ಏಷ್ಯಾದ ದ್ವೀಪ ರಾಷ್ಟ್ರ ಜಪಾನ್ ಯುರೋಪಿಯನ್ ರಾಷ್ಟ್ರ ಜರ್ಮನಿ ಜೊತೆ ಗಡಿಯನ್ನು ಹಂಚಿಕೊಳ್ಳುತ್ತದೆ ಎಂದು ಹೇಳುವ ಮೂಲಕ ಟ್ರೋಲ್‌ಗೆ ಒಳಗಾಗಿದ್ದಾರೆ.

ಇರಾನ್-ಪಾಕ್ ಗಡಿ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ವಿವರ ನೀಡುತ್ತಿದ್ದ ಇಮ್ರಾನ್ ಖಾನ್, ಎರಡನೇ ವಿಶ್ವ ಯುದ್ಧದ ಬಳಿಕ ಜರ್ಮನಿ ಮತ್ತು ಜಪಾನ್ ಗಡಿಯಲ್ಲಿ ಕಾರ್ಖಾನೆ ಸ್ಥಾಪಿಸಲಾಗಿತ್ತು ಎಂದು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ.

ಅಸಲಿಗೆ ಜರ್ಮನಿ ಮತ್ತು  ಫ್ರಾನ್ಸ್ ಹಸೆರು ಉಲ್ಲೇಖಿಸಬೇಕಿದ್ದ ಇಮ್ರಾನ್ ಖಾನ್, ತಪ್ಪಾಗಿ ಜಪಾನ್ ಹೆಸರು ಉಲ್ಲೇಖಿಸಿದ್ದಾರೆ. ಜಪಾನ್ ಮತ್ತ ಜರ್ಮನಿ ದೇಶಗಳು ಗಡಿಯನ್ನೇ ಹಂಚಿಕೊಳ್ಳದಿರುವಾಗ ಇಮ್ರಾನ್ ಖಾನ್ ಅವರ ಭೌಗೋಳಿಕ ಜ್ಞಾನ ಮೆಚ್ಚಲೇಬೇಕು ಎಂದು ನೆಟಿಜನ್ ಗಳು ಕಾಲೆಳೆದಿದ್ದಾರೆ.

ಇನ್ನು ಇಮ್ರಾನ್ ಹೇಳಿಕೆಗೆ ವ್ಯಂಗ್ಯವಾಡಿರುವ ಬಿಲಾವಲ್ ಭುಟ್ಟೋ ಜರ್ದಾರಿ, ಕ್ರಿಕೆಟ್ ಆಡುವವರೆಲ್ಲಾ ಆ ಆಟಕ್ಕಷ್ಟೇ ಲಾಯಕ್ಕು ಎಂದು ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು,ಏ.23ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.