ಇಸ್ಲಮಾಬಾದ್ :  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾದಿಯಲ್ಲಿ ನಡೆಯುತ್ತಿದ್ದಾರಾ? ಸದ್ಯದ ಬೆಳವಣಿಗೆ ಹೌದು ಎಂಬ ಉತ್ತರ ನೀಡುತ್ತಿದೆ.  

ತೆರಿಗೆ ಸಂಗ್ರಹಣೆ ಮೂಲಕ ದೇಶದ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಇಮ್ರಾನ್ ಖಾನ್ 2016 ರಲ್ಲಿ ಮೋದಿ ತೆಗೆದುಕೊಂಡ ರೀತಿಯದ್ದೇ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕಪ್ಪು ಹಣದ ಮೇಲೆ ಸಮರ ಸಾರಿದ್ದ ಮೋದಿ ಸರ್ಕಾರ ಬೇನಾಮಿ ಆಸ್ತಿ ಮಟ್ಟ ಹಾಕಲು ದಿಟ್ಟ ಕ್ರಮ ತೆಗೆದುಕೊಂಡಿತ್ತು. ಕಪ್ಪು ಹಣ ಘೋಷಣೆಗೂ ಅವಕಾಶ ನೀಡಿತ್ತು. 

ಇದೀಗ ಪಾಕಿಸ್ತಾನದಲ್ಲಿ  ಬೇನಾಮಿ ಆಸ್ತಿ ಇರುವವರು ಜೂನ್ 30 ರೊಳಗೆ ಘೋಷಣೆ ಮಾಡಬಹುದು ಎಂದು ಇಮ್ರಾನ್ ಖಾನ್ ಸೂಚಿಸಿದ್ದಾರೆ.

ಪಾಕಿಸ್ತಾನದಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದ್ದು ಎಲ್ಲ ವಿಭಾಗದ ಮೇಲೂ ಹೊರೆಯಾಗುವಷ್ಟು ತೆರಿಗೆ ಹೆಚ್ಚಳ ಮಾಡಲಿದ್ದಾರೆ ಎಂದು ವರದಿಗಳು ಹೇಳಿವೆ.